Follow Us On

WhatsApp Group
Important
Trending

ಸುಗ್ಗಿ ತಂಡದ ಪ್ರಮುಖ ಜಾನಪದ ಹಾಡುಗಾರ ಸುರೇಶ ಗೌಡ ವಿಧಿವಶ

ಅಂಕೋಲಾ: ತಾಲೂಕಿನ ಬೆಳಂಬಾರ ತಾಳೇಬೈಲ್ ನಿವಾಸಿ ಸುರೇಶ ನಾಗು ಗೌಡ (65) ಅವರು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ವಿಶ್ವದಾದ್ಯಂತ ಪ್ರಸಿದ್ದಿ ಪಡೆದಿರುವ ಸಾಂಪ್ರದಾಯಿಕ ಬೆಳಂಬಾರ ಸುಗ್ಗಿ ತಂಡದ ಜಾನಪದ ಹಾಡುಗಾರರಾಗಿ ಗುರುತಿಸಿಕೊಂಡಿದ್ದ ಸುರೇಶ ಗೌಡ,ಜನಪದ ಕಲೆಯಲ್ಲಿ ಬೆಳಂಬಾರದ ಹಿರಿಮೆಗೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಮೃತರು ಪತ್ನಿ, ಮೂವರು ಗಂಡು ಮಕ್ಕಳು, ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗ ತೊರೆದಿದ್ದಾರೆ.

ಜನಪದ ಕಲಾವಿದ , ಸರಳ ನಡೆ ನುಡಿಯ ಸುರೇಶ ಗೌಡ ಅವರ ನಿಧನಕ್ಕೆ ಊರ ಗೌಡ ಷಣ್ಮುಖ ಗೌಡ, ಊರ ಬುಧವಂತರು,ಕೋಲಕಾರರು, ಹಕ್ಕುದಾರರು ಮತ್ತು ಬೆಳಂಬಾರ ಹಾಗೂ ಸುತ್ತಮುತ್ತಲ ಗ್ರಾಮಗಳ ಪ್ರಮುಖರು ಮತ್ತು ಸಾರ್ವಜನಿಕರು, ಶಾಸಕ ಸತೀಶ ಸೈಲ್ ಸೇರಿದಂತೆ ವಿವಿಧ ಸ್ಥರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button