Important
Trending

CVSK High School: ಗಮನಸೆಳೆದ ಕಸದಿಂದ ರಸ’ ಹಾಗೂ ‘ವಸ್ತುಪ್ರದರ್ಶನ’

ಕುಮಟಾ: ನಿರುಪಯುಕ್ತ ವಸ್ತುಗಳೆಂದು ಬಿಸಾಡುವ ಹಳೆಯ ಬಾಟಲಿಗಳು, ಪೆನ್ನು, ಬಳಸಿದ ಕಾಗದಗಳು, ಕೆತ್ತಿದ ಪೆನ್ಸಿಲ್ ನ ಕಸ, ಕರಟಗಳು, ವಿವಿಧ ಧಾನ್ಯಗಳ ಹೊರಪದರಗಳು, ಶೇಂಗಾ ಸಿಪ್ಪೆ, ಐಸ್ ಕ್ರೀಮ್ ಕಪ್ಪುಗಳು, ಐಸ್ ಕ್ರೀಮ್ ಚಮಚಗಳು, ಕಡ್ಡಿಗಳು, ಉರಿದ ನಂತರ ಉಳಿಯುವ ಬೆಂಕಿಕಡ್ಡಿ, ಬೆಂಕಿ ಪೊಟ್ಟಣ ಹೀಗೆ ಹತ್ತು ಹಲವು ವಸ್ತುಗಳನ್ನು ಉಪಯೋಗಿಸಿ ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲತೆಯ ಮೂಲಕ ವಿವಿಧ ಮಾದರಿಗಳನ್ನು ತಯಾರಿಸಿ ಶಾಲೆಯಲ್ಲಿ ಏರ್ಪಡಿಸಿದ ವಸ್ತಪ್ರದರ್ಶನದಲ್ಲಿ ಅದನ್ನು ಪ್ರದರ್ಶಿಸಿ ಗಮನ ಸೆಳೆದರು.

ವಿದ್ಯಾರ್ಥಿಗಳು ತಯಾರಿಸಿದ ಬಗೆ ಬಗೆಯ ವಸ್ತುಗಳನ್ನು ಗಮನಿಸಿದ ಶಿಕ್ಷಕರು, ಪಾಲಕರು ಹಾಗೂ ಇನ್ನುಳಿದ ತರಗತಿಯ ವಿದ್ಯಾರ್ಥಿಗಳು ಕಸದಿಂದ ಹೀಗೆಯೂ ಮಾಡಬಹುದೇ ಎಂದು ಆಶ್ಚರ್ಯಪಟ್ಟರು. ಇವೆಲ್ಲವೂ ನಡೆದಿದ್ದು, ಕುಮಟಾ ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ರಂಗಾ ದಾಸ ಶಾನಭಾಗ ಹೆಗಡೆಕರ ( CVSK High School) ಬಾಲಮಂದಿರದಲ್ಲಿ.

ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಜೊತೆಗೆ ನಿರುಪಯುಕ್ತವೆಂದು ಎಸೆಯುವ ವಸ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಬಗ್ಗೆ ಮಾರ್ಗದರ್ಶನ ನೀಡುವ ದೃಷ್ಟಿಯಿಂದ ಆಯೋಜನೆಗೊಂಡಿದ್ದ ‘ಕಸದಿಂದ ರಸ’ ಹಾಗೂ ‘ವಸ್ತುಪ್ರದರ್ಶನ’ ಯಶಸ್ವಿಯಾಗಿ ನಡೆಯಿತು. ( CVSK High School ) ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲಕರ ಸಹಕಾರದೊಂದಿಗೆ ತೊಡಗಿಕೊಂಡು ವಿವಿಧ ಬಗೆಯ ವಸ್ತುಗಳನ್ನು ಪ್ರದರ್ಶಿಸಿ ಗಮನಸೆಳೆದರು.

ಖ್ಯಾತ ಆಯುರ್ವೇದ ವೈದ್ಯೆ ಡಾ. ಸುಪ್ರಿಯಾ ಸತೀಶ ಭಟ್ಟ ದೀಪ ಬೆಳಗುವ ಮೂಲಕ ಈ ವಸ್ತು ಪ್ರದರ್ಶನ ಉದ್ಘಾಟಿಸಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಮಾಜಕ್ಕೆ ಉಪಯುಕ್ತವಾಗುವ ಹಾಗೂ ಪ್ರಕೃತಿಯ ಉಳಿವಿನ ಬಗ್ಗೆಯೂ ಚಿಂತನೆ ನಡೆಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ಬಾಲಮಂದಿರದಲ್ಲಿಯೇ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ವಿಸ್ಮಯ ನ್ಯೂಸ್, ಕುಮಟಾ

Back to top button