Follow Us On

Google News
Important
Trending

ಕಳ್ಳತನದ ಸೂತ್ರಧಾರ ಯಾರು? ಬಾಯೇ ಬಿಡುತ್ತಿಲ್ಲ ಖತರ್ನಾಕ್ ಕಳ್ಳಿಯರು

ಕುಮಟಾ: ಬಸ್ ಗಳಲ್ಲಿ ಬುರ್ಖಾಧರಿಸಿ, ಪ್ರಯಾಣಿಸಿ, ಸಹ ಪ್ರಯಾಣಿಕರ, ಚಿನ್ನಾಭರಣ ದೋಚುತ್ತಿದ್ದ ಖರ್ತನಾಕ್ ಕಳ್ಳಿಯರನ್ನು ಪೊಲೀಸರು ಬಂಧಿಸಿ, ಹಲವು ದಿನಗಳೇ ಕಳೆಯಿತು. ಕಳ್ಳಿಯರು ಅಪರಾಧವನ್ನು ಒಪ್ಪಿದರೂ, ಕದ್ದ ಆಭರಣಗಳೆಲ್ಲಿ? ಎಂದು ಕೇಳಿದರೆ ಬಾಯಿಬಿಡುತ್ತಲ್ಲ ಎನ್ನಲಾಗಿದೆ. ಇವರು ನೆರೆಯ ರಾಜ್ಯ ತಮಿಳುನಾಡಿನವರಾಗಿದ್ದಾರೆ.

ಇವರಿಬ್ಬರ ಮೇಲೆ ಹಾಸನದಲ್ಲಿ ಮತ್ತು ಮಂಗಳೂರಿನಲ್ಲಿ ಇದೇ ರೀತಿಯ ದರೋಡೆ ಪ್ರಕರಣಗಳಿವೆ. ಅನುಮಾನಾಸ್ಪದವಾಗಿ ಹಿಡಿದ ಪ್ರಕರಣಗಳು ಇದೆ. ಇವರು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡವರು ಎಂದು ತಿಳಿದುಬಂದಿದೆ.

ಬುರ್ಖಾ ಧರಿಸಿ, ಕಳ್ಳತನ ಮಾಡುವ ಈ ಇಬ್ಬರೂ ಬಹಳಷ್ಟು ವರ್ಷಗಳಿಂದ ಇದೇ ಮಾದರಿಯಲ್ಲಿ ಸರ ಅಪಹರಣ ಮಾಡುತ್ತಿದ್ದರು ಎನ್ನಲಾಗಿದೆ. ಇವರಿಬ್ಬರೇ ಅಲ್ಲ, ಇಂಥ ಸರ ಅಪಹರಣ ಸರಣಿ ತಂಡವೇ ರಾಜ್ಯಾದ್ಯಂತ ಇರಬಹುದೆಂಬ ಶಂಕೆಗಳಿವೆ. ಇವರು ಬಸ್‌ನಲ್ಲಿ ಮಹಿಳೆಯರ ಸರ ಅಪಹರಣ ಮಾಡಿದ ದಿನವೇ ಇದೇ ಮಾದರಿಯ ಅಪಹರಣ ಇತರೇ ಜಿಲ್ಲೆಯಲ್ಲಿಯೂ ನಡೆದಿದೆ.

ಆದರೆ ಈ ವ್ಯಸ್ಥಿತ ತಂಡಕ್ಕೆ ಯಾರು ನಿಯಂತ್ರಕರು ತಿಳಿಯದು. ಒಂದು ಹಂತದಲ್ಲಿ ಇವರ ನೆಟ್‌ವರ್ಕ ಇರಬಹುದೆಂದು ಬಾವಿಸಲಾಗಿದೆ. ತಾವು ಕುಮಟಾ, ಹೊನ್ನಾವರ, ಭಟ್ಕಳದ ಕಡೆಗೆ ಮಹಿಳೆಯರ ಆಭರಣ ಕದ್ದಿರುವುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಆಭರಣಗಳೇನಾದವು? ಎಂಬ ಪ್ರಶ್ನೆಗೆ ಉತ್ತರಗಳಿಲ್ಲ. ಇದು ಪೊಲೀಸರಿಗೆ ಎದುರಾದ ಸವಾಲು. ಇವರಿಗೆ ಒಬ್ಬ ಸೂತ್ರದಾರರು ಇರಬಹುದೆಂದು ಶಂಕಿಸಲಾಗಿದೆ. ಈ ಸತ್ಯ ತನಿಖೆಯಿಂದ ಬಯಲಾಗಬೇಕಿದೆ.

ಬ್ಯರೋ ರಿಪೋರ್ಟ, ವಿಸ್ಮಯ ನ್ಯೂಸ್

Back to top button