ಆಮೆಯ ಸಾವಿಗೆ ಕಾರಣವಾದ ಪ್ಲಾಸ್ಟಿಕ್: ಆತಂಕ ತಂದ ಮೃರಣೋತ್ತರ ಪರೀಕ್ಷೆ

ಕಾರವಾರ: ಸಮುದ್ರದ ಒಡಲಿಗೆ ಪ್ರತಿನಿತ್ಯ ಅಪಾರಪ್ರಮಾಣದ ಪ್ಲಾಸ್ಟಿಕ್ ಸೇರುತ್ತಿದ್ದು, ಅದೆಷ್ಟೊ ಕಡಲ ಜೀವಿಗಳು ಇದರಿಂದ ಮೂಕ ವೇದನೆ ಅನುಭವಿಸುತ್ತಿವೆ. ಇಲ್ಲವೆ ಸಾವಿಗೆ ಶರಣಾಗುತ್ತಿವೆ. ಹೌದು, ಇದೀಗ ಕಾರವಾರದ ಮಾಜಾಳಿ ಬಳಿ ಪತ್ತೆಯಾದ ಆಮೆಯೊಂದರ ಮೃತದೇಹದಲ್ಲಿ ಪ್ಲಾಸ್ಟಿಕ್ ಸಿಕ್ಕಿದ್ದು, ಪ್ಲಾಸ್ಟಿಕ್ ಸೇವನೆಯಿಂದಲೇ ಆಮೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಇಲ್ಲಿನ ಕಡಲತೀರದಲ್ಲಿ ಅಪರೂಪವಾಗಿರುವ ‘ಹಾಕ್ಸ್ ಬಿಲ್’ ಜಾತಿಯ ಆಮೆಯ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ದೇಹದಲ್ಲಿ ಪ್ಲಾಸ್ಟಿಕ್ ಮತ್ತು ಬಿಸ್ಕೇಟ್ ಪ್ಯಾಕ್ ಪತ್ತೆಯಾಗಿದೆ. ಈಗಾಗಲೇ ಅಪಾರ ಪ್ರಮಾಣದಲ್ಲಿ ಕಡಲಿಗೆ ಪ್ಲಾಸ್ಟಿಕ್ ಸೇರಿದ್ದು, ಇದನ್ನು ಹೀಗೆಯೇ ನಿರ್ಲಕ್ಷ ಮಾಡಿದರೆ ಕಡಲ ಜೀವಿಗಳ ಮಾರಣಹೋಮ ಆಗಲಿದೆ ಎನ್ನುವ ಮಾತು ಕೇಳಿ ಬರುತ್ತಿವೆ. ಸರ್ಕಾರ ಮತ್ತು ಸಂಬoಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version