ಕಾರವಾರದಲ್ಲಿ ವೇವ್ ರೈಡ್ ಬಾಯ್ ನಾಪತ್ತೆ ಪ್ರಕರಣ: ದಾಖಲಾಯ್ತು ಕೇಸ್

ಕಾರವಾರದ ಸಮುದ್ರದಲ್ಲಿ ಸುಮಾರು 8 ನಾಟಿಕಲ್ ಮೈಲು ದೂರದಲ್ಲಿ ಲೈಟ್ ಹೌಸ್ ಬಳಿ ಅಳವಡಿಸಲಾಗಿದ್ದ ಸುಮಾರು 1 ಕೋಟಿ ರೂ ಮೌಲ್ಯದ ಸಾಗರ ಹವಾಮಾನ ಮೂನ್ಸೂಚನೆ ನೀಡುವ ಯಂತ್ರ ವೇವ್ ರೈಡ್ ಬೋಯ್ ನಾಪತ್ತೆ ಪ್ರಕರಣಕ್ಕೆ ಸಂಬoಧಿಸಿದoತೆ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಕರಾವಳಿ ಕಾವಲು ಪೊಲೀಸ್ ಪಡೆಯ ಬೋಟ್‌ನಲ್ಲಿ ಬೋಯ್ ನಾಪತ್ತೆಯಾದ ಸಮುದ್ರದ ಭಾಗಕ್ಕೆ ತೆರಳಿದ ಕಾರವಾರ ಶಹರ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಕಾರವಾರ ಮರೀನ್ ಬಯೋಲಜಿಯ ಸಿಬ್ಬಂದಿಗಳು ಸ್ಥಳದಲ್ಲಿ ಪಂಚನಾಮೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version