Focus News
Trending

Antravalli: ಅದ್ಧೂರಿಯಾಗಿ ನಡೆದ ಅಂತ್ರವಳ್ಳಿಯ ಹುಲಿದೇವರ ಪುನರ್ ಪ್ರತಿಷ್ಠೆ

ನೂತನ ಆಲಯ ಲೋಕಾರ್ಪಣೆ

ಕುಮಟಾ: ತಾಲೂಕಿನ ಅಂತ್ರವಳ್ಳಿಯ ಶ್ರೀ ಹುಲಿದೇವ ದೇವಸ್ಥಾನದ ಶ್ರೀ ದೇವರ ಪುನರ್ ಪ್ರತಿಷ್ಟೆ ಮತ್ತು ನೂತನ ಆಲಯದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅಂತ್ರವಳ್ಳಿ ( Antravalli ) ಗ್ರಾಮದ ವಿಶ್ವೇಶ್ವರ ದೇವರ ಪರಿವಾರ ದೇವರಾದ ಹುಲಿದೇವರುಗಳ ನೂತನ ಆಲಯದ ಲೋಕಾರ್ಪಣೆ ಮತ್ತು ಪುನರ್ ಪ್ರತಿಷ್ಠಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ವಿವಿಧ ಭಾಗದಿಂದ ಭಕ್ತಾದಿಗಳು ಆಗಮಿಸಿ ಶ್ರೀದೇರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಪುನರ್ ಪ್ರತಿಷ್ಠಾ ಮಹೋತ್ಸವದ ವಿಶೇಷವಾಗಿ ಎರಡನೆ ದಿನವಾದ ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನವಗ್ರಹ ಶಾಂತಿ, ಪ್ರತಿಷ್ಟಾಂಗ ಹೋಮ, ಪ್ರಾಣ ಪ್ರತಿಷ್ಟಾ ಹೋಮ ಸೇರಿದಂತೆ ತೀರ್ಥ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆಯು ಸಾವಿರಾರು ಭಕ್ತಾದಿಗಳ ಕೂಡುವಿಕೆಯಲ್ಲಿ ದಾರ್ಮಿಕ ವಿಧಿ ವಿಧಾನದಂತೆ ಸಂಪನ್ನಗೊoಡಿತು.

ಗ್ರಾಮಸ್ಥರು ಹಾಗು ಭಕ್ತರಾದ ನಾರಾಯಣ ಹೆಗಡೆ ಅವರು ಮಾತನಾಡಿ, ಬಹುವರ್ಷಗಳ ಹಿಂದೆ ನಿರ್ಮಿಸಲಾದ ಶ್ರೀ ಹುಲಿದೇವರುಗಳ ಕಟ್ಟಡವು ಶಿಥಿಲಾವಸ್ಥೆಗೆ ಬಂದ ಹಿನ್ನೆಲೆಯಲ್ಲಿ ಅತ್ಯಂತ ಭವ್ಯವಾದ ಕಟ್ಟಡವನ್ನು ನಿರ್ಮಿಸಿ ಶ್ರೀ ದೇವರುಗಳ ಪುನರ್ ಪ್ರತಿಷ್ಠಾ ಮಹೋತ್ಸವವನ್ನು ಅತ್ಯಂತ ವಿಜ್ರಂಬಣೆಯಿoದ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

( Antravalli ) ಗ್ರಾಮಸ್ಥರು ಹಾಗು ಹುಲಿದೇವರ ಕಟ್ಟಡ ಮತ್ತು ಪುನರ್ ಪ್ರತಿಷ್ಠಾ ಸಮಿತಿಯ ಗಣಪತಿ ಹೆಗಡೆ ಅವರು ಮಾತನಾಡಿ, ಭಕ್ತಾದಿಗಳ ಸೇವೆ, ಸಹಕಾರ ಮನೋಭಿಷ್ಟೆಯಿಂದ ವಿಶ್ವೇಶ್ವರ ದೇವರ ಪರಿವಾರ ದೇವರಾದ ಶ್ರೀ ಹುಲಿದೇವರುಗಳ ನೂತನ ಭವ್ಯವಾದ ದೇವಾಲಯವನ್ನು ನಿರ್ಮಿಸಿ ಅದರ ಪುನರ್ ಪ್ರತಿಷ್ಟಾಪನೆಯು ಸಂಪನ್ನಗೊoಡಿದೆ ಎಂದು ವಿವಿರಣೆ ನೀಡಿದರು.

ಗ್ರಾಮಸ್ಥರು ಗ್ರಾಮಸ್ಥರು ಹಾಗು ಹುಲಿದೇವರ ಕಟ್ಟಡ ಮತ್ತು ಪುನರ್ ಪ್ರತಿಷ್ಠಾ ಸಮಿತಿಯ ಕೃಷ್ಣ ಗೌಡ ಅವರು ಮಾತನಾಡಿ ದೈವ ಶಕ್ತಿ ಹಾಗೂ ಭಕ್ತಾಧಿಗಳ ಸಹಾಯ ಸಹಕಾರದಿಂದ ಶ್ರೀ ದೇವರ ಭವ್ಯವಾದ ಕಟ್ಟಡ ತಲೆಯೆತ್ತಿ ನಿಂತಿದೆ ಎಂದು ಅಭಿಪ್ರಾಯಪಟ್ಟರು. ನಾನಾ ಭಾಗದ ಭಕ್ತರು ನಡೆದುಕೊಳ್ಳುವ ದೇವಾಲಯ ಇದಾಗಿದೆ ಎಂದು ಭಕ್ತರಾದ ಮಂಜುನಾಥ ಮಡಿವಾಳ ಅವರು ಮಾಹಿತಿ ನೀಡಿದರು.

Video News

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Back to top button