ಅಂಕೋಲಾ: ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸಿನಿಮೀಯ ರೀತಿಯಲ್ಲಿ ಹೆದ್ದಾರಿ ಅಂಚಿಗೆ ಪಲ್ಟಿಯಾಗಿದೆ. ಈ ಘಟನೆ ಸಿನ ಕ್ಯಾಮರಾದಲ್ಲಿ ಸೆರೆಯಾಗಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರೊಂದು ಸಿನಿಮೀಯ ರೀತಿಯಲ್ಲಿ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಕಾರವಾರ ತಾಲೂಕು ವ್ಯಾಪ್ತಿಯ ಅಮದಳ್ಳಿ ಗ್ರಾಮ ಪಂಚಾಯತ ಎದುರಿಗೆ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು,ಹೆದ್ದಾರಿಯಲ್ಲಿ ಜಾರಿ ಬಂದು,ಹಿಮ್ಮುಖವಾಗಿ ತಿರುಗಿ ನಂತರ ಹೆದ್ದಾರಿ ಅಂಚಿಗೆ ದೂಳೆಬ್ಬಿಸುತ್ತಾ ಪಲ್ಟಿಯಾದಂತಿದೆ. ಹೆದ್ದಾರಿ ಅಂಚಿಗೆ ಮತ್ತು ಅಕ್ಕಪಕ್ಕದಲ್ಲಿರುವ ಹಲವರು ನೋಡ ನೋಡುತ್ತಿರುವಾಗಲೇ ಈ ಅವಘಡ ಸಂಭವಿಸಿದ್ದು,ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ರಸ್ತೆ ಅಪಘಾತದ ದೃಶ್ಯಾವಳಿ,ಹೆದ್ದಾರಿ ಅಂಚಿನ ಕಟ್ಟಡ ಒಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ತೆರೆಯಾಗಿದ್ದು,ಈಗ ಎಲ್ಲೆಡೆ ವೈರಲ್ ಆಗುತ್ತಿದೆ.ಅಪಘಾತದ ಸುದ್ದಿ ತಿಳಿದ ಪೊಲೀಸರು,ಅಂಬುಲೆನ್ಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕರ್ತವ್ಯ ನಿರ್ವಹಿಸಿದರು. ಕಾರಿನಲ್ಲಿದ್ದ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು,ಅದೃಷ್ಟ ವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿ ಅಂಚಿನ ತಗ್ಗಿನಲ್ಲಿ ಬಿದ್ದ ಕಾರನ್ನು ಕ್ರೇನ್ ಬಳಸಿ ಮೇಲಕೆತ್ತಲಾಗಿದೆ.ಸ್ಥಳೀಯರು ಸಹಕರಿಸಿದರು.ರಸ್ತೆ ಅಪಘಾತದ ಘಟನೆಯ ಕುರಿತಂತೆ ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ