PDO Recruitment 2024: ಪಿಡಿಓ ನೇಮಕಾತಿ: 70 ಸಾವಿರದ ವರೆಗೆ ಮಾಸಿಕ ವೇತನ: Apply Now

ಒಟ್ಟು 247 ಪಿಡಿಒಗಳ ಹುದ್ದೆಗಳಿಗೆ ಪ್ರತ್ಯೇಕ ಅಧಿಸೂಚನೆ ಬಿಡುಗಡೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿಯಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಭರ್ತಿಗೆ ( PDO Recruitment 2024) ಅಧಿಸೂಚನೆ ಪ್ರಕಟವಾಗಿದೆ. ಕರ್ನಾಟಕ ಲೋಕಸೇವಾ ಆಯೋಗ ಪಿಡಿಓ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಿದೆ. ಮಾಸಿಕ ಆರಂಭಿಕ ವೇತನ ಶ್ರೇಣಿ 37, 900 ಸಾವಿರದಿಂದ 70,850ರ ವರೆಗೆ ಇರಲಿದೆ. ಉಳಿಕೆ ಮೂಲ ವೃಂದ ಮತ್ತು ಹೈದರಾಬಾದ್ ಕರ್ನಾಟಕ ವೃಂದದ ಒಟ್ಟು 247 ಪಿಡಿಒಗಳ ಹುದ್ದೆಗಳಿಗೆ ಪ್ರತ್ಯೇಕ ಅಧಿಸೂಚನೆ ಬಿಡುಗಡೆಗೊಂಡಿದೆ.

ಇದನ್ನೂ ಓದಿ: ಉದ್ಯೋಗಾವಕಾಶದ ಮಾಹಿತಿ: Bank Recruitment: ಬ್ಯಾಂಕ್ ನೇಮಕಾತಿ: 93 ಹುದ್ದೆಗಳಿಗೆ ಅರ್ಜಿ: 87 ಸಾವಿರದ ವರೆಗೆ ಮಾಸಿಕ ವೇತನ

( PDO Recruitment 2024) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ-35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಹಾಗು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ,ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಹುದ್ದೆಗಳ ಹೆಸರುಪಿಡಿಓ
ಇಲಾಖೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಒಟ್ಟು ಹುದ್ದೆಗಳು247
ಮಾಸಿಕ ವೇತನಮಾಸಿಕ ವೇತನ 37, 900 ಸಾವಿರದಿಂದ 70,850 ಸಾವಿರ

ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಏಪ್ರಿಲ್ 15, 2024 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲಿಸಲು ಮೇ 15, 2024 ಕೊನೆಯ ದಿನವಾಗಿದೆ. ಕರ್ನಾಟಕ ಪಿಡಿಒ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಹೇಗಿರುತ್ತದೆ? ಪತ್ರಿಕೆ-1: ಒಟ್ಟು 400 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಕುರಿತ 100 ಅಂಕಗಳು ಇರಲಿದೆ. ಇದು ಒಟ್ಟು 200 ಅಂಕಗಳಿಗೆ ಪರೀಕ್ಷೆ ಆಗಿರುತ್ತದೆ, ಒಟ್ಟು ಪರೀಕ್ಷೆ ಅವಧಿ 2 ಗಂಟೆ. ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳು ಇರುತ್ತವೆ.

ಪತ್ರಿಕೆ-2: ಎರಡನೇ ಪತ್ರಿಕೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ವಿಷಯಕ್ಕೆ ಸಂಬAಧಿಸಿದ 100 ಪ್ರಶ್ನೆಗಳು ಇರುತ್ತವೆ. ಇದು 200 ಅಂಕಗಳ ಪರೀಕ್ಷೆ ಆಗಿರುತ್ತದೆ. ಸಮಯ ಎರಡು ಗಂಟೆಯಾಗಿದ್ದು, ವಸ್ತುನಿಷ್ಠ ಬಹು ಆಯ್ಕೆ ಪತ್ರಿಕೆ ಆಗಿರುತ್ತದೆ. ಇನ್ನು ಹೆಚ್ಚಿನ ಉದ್ಯೋಗಾವಕಾಶ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಮೇ 15, 2024
ಅಧಿಸೂಚನೆ 1ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ 2ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಕೆ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version