ಹೆಚ್ಚುತ್ತಲೇ ಇದೆ ಮಂಗನಕಾಯಿಲೆ: ಸಿದ್ದಾಪುರದಲ್ಲಿ ಮತ್ತೊಂದು ಸಾವು: ಮತ್ತಷ್ಟು ಆತಂಕ

ಸಿದ್ದಾಪುರ: ಎಲ್ಲೆಡೆ ಮಂಗನ ಕಾಯಿಲೆಯ ಆತಂಕ ಹೆಚ್ಚಾಗಿದ್ದು, ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದಾಗಿ ಎರಡನೇ ಸಾವು ಸಂಭವಿಸಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಮಂಗನ ಕಾಯಿಲೆಯ ಆತಂಕ ದಿನೆ ದಿನೆ ಏರುತ್ತಲೇ ಇದ್ದು, ಸೋಂಕಿತರ ಸಂಖ್ಯೆಯು ಸಹ ಹೆಚ್ಚುತ್ತಿದೆ ಎನ್ನಲಾಗಿದೆ. ಸಿದ್ದಾಪುರ ತಾಲೂಕಿನ ಕೊರ್ಲಕೈ ಗ್ರಾಮದ 60 ವರ್ಷದ ವೃದ್ಧೆ ಮಂಗನ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದಾರೆ. ಕಳೆದ 20 ದಿನಗಳಿಂದ ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವೃದ್ದೆಗೆ ಜ್ವರ ದಿನದಿಂದ ದಿನಕ್ಕೆ ಅತಿಯಾಗುತ್ತಲೇ ಇತ್ತು. ಕಾರಣ ಮೂರು ದಿನಗಳ ಹಿಂದೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇದು ಮಂಗನ ಕಾಯಿಗೆ ಆದ ಎರಡನೆ ಬಲಿಯಾಗಿದೆ. ಐದು ದಿನಗಳ ಹಿಂದೆ ಸಿದ್ದಾಪುರ ತಾಲೂಕಿನ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಸದ್ಯ ಸಿದ್ದಾಪುರ ತಾಲೂಕಿನಲ್ಲಿ ಮಂಗನ ಕಾಯಿಲೆಯಿಂದ 43 ಮಂದಿ ಬಳಲುತ್ತಿದ್ದಾರೆ.

ಬ್ಯುರೋ ರಿಪೋರ್ಟ್, ವಿಸ್ಮಯ ನ್ಯೂಸ್

Exit mobile version