Job Info: 17ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ: ಇಎಸ್‌ಐ, ಪಿಎಫ್ ಸೇರಿ ಆಕರ್ಷಕ ವೇತನ
ಮ್ಯಾನೇಜರ್, ಸೇಲ್ಸ್ ಎಕ್ಸಿಕ್ಯೂಟಿವ್, ಅಕೌಂಟೆಂಟ್ ಹಾಗು ಸಹಾಯಕ ಸಿಬ್ಬಂದಿ ಸೇರಿ ಒಟ್ಟು 17ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ
Job Info: ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಗೃಹೋಪಯೋಗಿ ಮತ್ತು ಫರ್ನಿಚರ್ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ಸಂಸ್ಥೆಯಲ್ಲಿ ಹಲವು ಉದ್ಯೋಗಾವಕಾಶವಿದೆ. ಮ್ಯಾನೇಜರ್, ಸೇಲ್ಸ್ ಎಕ್ಸಿಕ್ಯೂಟಿವ್, ಅಕೌಂಟೆಂಟ್ ಹಾಗು ಸಹಾಯಕ ಸಿಬ್ಬಂದಿ ಸೇರಿ ಒಟ್ಟು 17ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ (Job Info) ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಹೊನ್ನಾವರ ಶಾಖೆಯಲ್ಲಿ ಕಾರ್ಯನಿರ್ವಹಿಸಲು 10, ಕುಮಟಾ ಶಾಖೆಯಲ್ಲಿ 4 ಮತ್ತು ಶಿರಸಿ ಶಾಖೆಯಲ್ಲಿ 3 ಹುದ್ದೆಗಳು ಖಾಲಿಯಿದ್ದು, ಆಸಕ್ತರು ಸಂಪರ್ಕಿಸಬಹುದಾಗಿದೆ. ಹುದ್ದೆಗಳಿಗೆ ಅನುಗುಣವಾಗಿ ಆಕರ್ಷಕ ವೇತನ ನೀಡಲಾಗುವುದು.
ಇದನ್ನೂ ಓದಿ: PDO Recruitment 2024: ಪಿಡಿಓ ನೇಮಕಾತಿ: 70 ಸಾವಿರದ ವರೆಗೆ ಮಾಸಿಕ ವೇತನ: Apply Now
ಇಎಸ್‌ಐ, ಪಿಎಫ್ ಸೇರಿದಂತೆ ಹಲವು ಸೌಲಭ್ಯವಿದ್ದು, ಆಸಕ್ತ ಯುವಕ, ಯುವತಿಯರು ತಮ್ಮ ಬಯೋಡಾಟಾವನ್ನು ಈ ಕೆಳಗಿನ ಮೇಲ್ ಐಡಿ ( [email protected]) ಅಥವಾ ವಾಟ್ಸಪ್ ನಂಬರ್‌ಗೆ ( 8494988555 ) ಕಳುಹಿಸಬೇಕಿದೆ. ನಿಮ್ಮ ಬಯೋಡಾಟಾದಲ್ಲಿ ಈ ಮೊದಲಿನ ಕೆಲಸದ ಮಾಹಿತಿ, ವಿದ್ಯಾರ್ಹತೆ, ನಿಮ್ಮ ಅಡ್ರೆಸ್ ಮತ್ತು ಸಂಪರ್ಕ ಸಂಖ್ಯೆಯ ಮಾಹಿತಿ ಇರಲಿ. ( ವಿಶೇಷ ಸೂಚನೆ: ಆಯ್ದ ಹುದ್ದೆಗಳಿಗೆ ಮಾತ್ರ ಇಎಸ್‌ಐ, ಪಿಎಫ್ ಸೌಲಭ್ಯವಿದ್ದು, ಸಂದರ್ಶನದ ವೇಳೆ ಈ ಕುರಿತು ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುವುದು.) ಕುಮಟಾದ ತರಂಗ ಎಲೆಕ್ಟ್ರಾನಿಕ್ಸ್ ಗೆ ನೇರವಾಗಿ ಭೇಟಿ ನೀಡಿ, ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Contact details- 8494988555, 9449955955
ಇನ್ನು ಹೆಚ್ಚಿನ ಉದ್ಯೋಗಾವಕಾಶದ ಸುದ್ದಿ, ಹೊಸ ಹೊಸ ಸರ್ಕಾರಿ ಮತ್ತು ಖಾಸಗಿ ನೇಮಕಾತಿ ಕುರಿತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್