ಮನೆಯ ಸಮೀಪ ಉರುಳಿಬಿದ್ದ ಗ್ಯಾಸ್ ಟ್ಯಾಂಕರ್ : ಊಟ, ನಿದ್ದೆ ಬಿಟ್ಟು ಆತಂಕದಲ್ಲೇ ಕಾಲ ಕಳೆದ ಮನೆಯವರು
ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಕರ್ನಲ್ ಹಿಲ್ ಸಮೀಪ ರಾತ್ರಿ ಗ್ಯಾಸ್ ಟ್ಯಾಂಕರ್ ಮನೆಯ ಸಮೀಪ ಹೋಗಿ ಬಿದ್ದರು ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಿ ಮನೆಯವರ ಸಮಸ್ಯೆ ಆಲಿಸುವ ಕಾರ್ಯ ಮಾಡಿಲ್ಲ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಐ.ಆರ್.ಬಿ ಅವೈಜ್ಞಾನಿಕ ಕಾಮಗಾರಿಯಿಂದ ಪಟ್ಟಣದ ಇಕ್ಕಟ್ಟಾದ ರಸ್ತೆಯ ಪರಿಣಾಮ ರಸ್ತೆಯ ಬಲಬದಿಯಲ್ಲಿ ವಾಹನ ನಿಲ್ಲಿಸಿ ತೆರಳಿದಾಗ ಟ್ಯಾಂಕರ್ ರಸ್ತೆ ಪಕ್ಕದ ತಗ್ಗು ಪ್ರದೇಶದ ಮನೆಯ ಮುಂದೆ ಹೋಗಿ ಬಿದ್ದಿದೆ. ಪರಿಣಾಮ ರಸ್ತೆ ಅಂಚಿನ ಮೂರು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದಲ್ಲದೇ ಒಂದು ಮನೆಯ ಮುಂಭಾಗ ಭಾಗಶಃ ಹಾನಿಯಾಗಿ ಪಕ್ಕದ ಮನೆಯ ಕೆಲ ಭಾಗಕ್ಕೆ ಹಾನಿ ಸಂಭವಿಸಿದೆ.
ಗ್ಯಾಸ್ ತುಂಬಿದ ಟ್ಯಾಂಕರ ಆಗಿರುವುದರಿಂದ ಮನೆಯ ಮಂದಿಯೆಲ್ಲ ಗಾಬರಿಯಾಗಿ ಮನೆ ಬಿಟ್ಟು ಸ್ಥಳದಿಂದ ಓಡಿ ಹೋಗಿ ಸೋರಿಕೆ ಆಗದೆ ಇರುದನ್ನು ಖಚಿತವಾಗುತ್ತಿದ್ದಂತೆ ಮನೆಯ ಸಮೀಪದಲ್ಲೆ ಕುಳಿತು ರಾತ್ರಿ ಕಳೆದಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ಹೊರತಾಗಿ ಮನೆಯ ಸಮೀಪ ಯಾರು ಬಂದಿಲ್ಲ . ರಾತ್ರಿ ಊಟ, ಮುಂಜಾನೆ ಟೀ, ವಾಸ ಮಾಡಲು ಬದಲಿ ವ್ಯವಸ್ಥೆ ಕಲ್ಪಿಸಬೇಕಿದ್ದ ತಾಲೂಕ ಆಡಳಿತ ಇತ್ತ ಸುಳಿದಿಲ್ಲ. ಯಾರೋಬ್ಬರ ನಮ್ಮ ಕಷ್ಟಕ್ಕೆ ಧಾವಿಸಿಲ್ಲ. ನೆರೆಯ ತಾಲೂಕಿನ ಬರ್ಗಿಯಲ್ಲಿ ಕೆಲ ವರ್ಷದ ಹಿಂದೆ ನಡೆದ ದುರಂತ ಕಣ್ಣಮುಂದೆ ಬಂದತಾಗಿದೆ. ಆಮೇಲೆ ಪರಿಹಾರ ಕೊಡುದಕ್ಕಿಂತ ಇದ್ದಾಗ ಸಹಾಯ ಮಾಡುವುದಿಲ್ಲ ಎಂದು ಸಾರ್ವಜನಿಕರು,, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮನೆಯ ಮಾಲೀಕರಾದ ಪ್ರಭಾಕರ ಆಚಾರಿ ಮಾತನಾಡಿ ಇರ್ವರು ಹೃದಯ ರೋಗದಿಂದ ಬಳಲುತ್ತಿದ್ದು, ಊಟ, ವಸತಿ ಔಷಧಿ ಬಗ್ಗೆ ಯಾರು ಸ್ಪಂದಿಸಿಲ್ಲ. ಮನೆಗೆ ಹಾನಿ ಸಂಭವಿಸಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿದೆ. ಎಲ್ಲವನ್ನು ಸರಿಪಡಿಸುವತ್ತ ಅಧಿಕಾರಿಗಳು ಜವಬ್ದಾರಿ ವಹಿಸಲಿ ಎಂದರು. ಸ್ಥಳಿಯರು ಕುಟುಂಸ್ತರು ಆದ ನಿತಿನ್ ಆಚಾರಿ ಮಾತನಾಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಬ್ದಾರಿತನದಿಂದ ಇಂತಹ ದುರಂತ ಸಂಭವಿಸುತ್ತಿದೆ. ತಗ್ಗು ಪ್ರದೇಶದಲ್ಲಿ ಮನೆ ಇದ್ದರೂ ಹೆದ್ದಾರಿ ತಡೆಗೊಡೆ ನಿರ್ಮಿಸಿಲ್ಲ. ರಸ್ತೆ ಪಕ್ಕ ಗೂಡಂಗಡಿಗಳು ಅನಧಿಕೃತವಾಗಿದ್ದರೂ, ಪ.ಪಂ. ಕರ ವಸೂಲಿ ಮಾಡುತ್ತಿದೆ. ಇದರಿಂದ ಇಕ್ಕಟ್ಟಾದ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಹೋಗಿ ಇಂತಹ ದುರಂತ ಸಂಭವಿಸುತ್ತಿದೆ. ಇದರ ನೇರ ಹೊಣೆಗಾರರು ಅಧಿಕಾರಿಗಳೆ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ಗಿರೀಶ ನಾಯ್ಕ ಹಡಿಕಲ್ ಮಾತನಾಡಿ ಟ್ಯಾಂಕರ್ ಬಿದ್ದು, ಆರೇಳು ಗಂಟೆ ಕಳೆದರೂ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕೈಗೊಳ್ಳಲು ಸಾಧ್ಯವಾಗದೇ ಇರುವುದು ದುರಂತವಾಗಿದೆ. ಮಧ್ಯಾಹ್ನದವರೆಗೂ ಕಾದು ಸಮಸ್ಯೆ ಬಗೆಹರಿಯದೆ ಹೋದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ