Important
Trending

ಮಾರಿಕಾಂಬಾ ದೇವಿ ಜಾತ್ರೆಯ ವೇಳೆ ಕಾಣಿಕೆಡಬ್ಬಿಯಿಂದಲೇ 1.75 ಕೋಟಿ ರೂಪಾಯಿ ಸಂಗ್ರಹ: ಶನಿವಾರ ಮತ್ತು ಭಾನುವಾರ ಮೂರುವರೆ ಲಕ್ಷ ದಾಟಿದ ಭಕ್ತರ ಸಂಖ್ಯೆ

ಶಿರಸಿ: ನಗರದ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಭಕ್ತರು ತಾಯಿಗೆ ನಿರೀಕ್ಷೆ ಮೀರಿ ಕಾಣಿಕೆ ಸಮರ್ಪಿಸಿದ್ದಾರೆ. ಜಾತ್ರಾ ಅವಧಿಯಲ್ಲಿ ಒಟ್ಟೂ 1.75 ಕೋಟಿ ರೂಪಾಯಿ ಕಾಣಿಕೆ ಡಬ್ಬಿಯಿಂದ ಸಂದಾಯವಾಗಿದೆ. ಈ ವರ್ಷ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಇರುವ ಕಾರಣ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

ನಿತ್ಯ 2ಲಕ್ಷಕ್ಕೂ ಅಧಿಕ ಭಕ್ತರಿಂದ ದೇವಿಯ ದರ್ಶನವಾಗಿದ್ದರೆ, ಶನಿವಾರ ಮತ್ತು ಭಾನುವಾರ ಈ ಸಂಖ್ಯೆ 3.5 ಲಕ್ಷ ದಾಟಿತ್ತು. ಬಂದ ಭಕ್ತರು ತಾಯಿಯ ದರ್ಶನ ಮಾಡಿದ ಬಳಿಕ ಆವರಣದಲ್ಲಿಯೇ ಇರುವ ಕಾಣಿಕೆ ಡಬ್ಬಿಗೆ ಕಾಣಿಕೆ ಸಲ್ಲಿಸಿ, ತಮ್ಮ ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸಿದ್ದಾರೆ. 100, 200, ಹಾಗೂ 500 ರೂ.ಗಳ ನೋಟುಗಳು ಅಧಿಕ ಸಂಖ್ಯೆಯಲ್ಲಿ ಕಾಣಿಕೆ ಡಬ್ಬಿಗೆ ಬಿದ್ದಿವೆ. ಇದರ ಹೊರತಾಗಿ ಚಿಲ್ಲರೆ ನಾಣ್ಯಗಳನ್ನೂ ಸಹ ಭಕ್ತರು ಅಧಿಕ ಸಂಖ್ಯೆಯಲ್ಲಿ ಹುಂಡಿಗೆ ಹಾಕಿದ್ದಾರೆ.

ಪ್ರತಿ ದಿನದ ಕಾಣಿಕೆಯನ್ನೂ ಪ್ರತ್ಯೇಕ ಚೀಲಗಳಲ್ಲಿ ತುಂಬಿಡಲಾಗಿದ್ದು, ಈಗ ಎಣೆಸುವ ಕಾಂiÀið ನಡೆದಿದೆ. ವಿಶೇಷವೆಂದರೆ ಕಾಣಿಕೆ ಡಬ್ಬಕ್ಕೆ ಭಕ್ತರು ಬೆಳ್ಳಿಯ ತೊಟ್ಟಿಲು ಹಾಕಿ ಮಗುವಾಗುವಂತೆ ಹರಕೆ ಹೊತ್ತಿದ್ದಾರೆ. ಇನ್ನು ಕೆಲವರು ಬಂಗಾರದ ತಾಳಿ, ಗಟ್ಟಿ ಬಂಗಾರ, ಬೆಳ್ಳಿಯ ಕಣ್ಣುಗಳನ್ನೂ ಕಾಣಿಕೆ ಹಾಕಿದ್ದಾರೆ.

ಬ್ಯರೋ ರಿಪೋರ್ಟ, ವಿಸ್ಮಯ ನ್ಯೂಸ್

Back to top button