ನಿಯಮಿತ ಸ್ವಯಂ ಪರೀಕ್ಷಾ ಕ್ರಮದಿಂದ ಆರಂಭಿಕ ಹಂತದಲ್ಲೇ ‘ಸ್ತನ ಕ್ಯಾನ್ಸರ್’ ಗುರುತಿಸುವುದು ಸುಲಭ ಸಾಧ್ಯ: ಡಾ.ಆಜ್ನಾ ನಾಯಕ.

ಕುಮಟಾ : ನಿಯಮಿತವಾಗಿ ಸ್ವಯಂ ಪರೀಕ್ಷಾ ಕ್ರಮಗಳನ್ನು ಮಹಿಳೆಯರು ರೂಢಿಯಲ್ಲಿರಿಸಿಕೊಳ್ಳುವುದರಿಂದ ಆರಂಭಿಕ ಹಂತದಲ್ಲೇ ‘ಸ್ತನ ಕ್ಯಾನ್ಸರ್’ ನ್ನು ಪತ್ತೆ ಹಚ್ಚುವುದು ಸುಲಭ ಸಾಧ್ಯವಾಗುತ್ತದೆ. ಈ ಕ್ರಮಗಳನ್ನು ಪ್ರತಿಯೋರ್ವ ಮಹಿಳೆಯೂ ಅರಿತಿರುವುದು ಅತ್ಯವಶ್ಯಕ ಎಂದು ಕುಮಟಾ ತಾಲೂಕಾ ಆರೋಗ್ಯಾಧಿಕಾರಿ ಡಾ.ಆಜ್ನಾ ನಾಯಕ ಅಭಿಪ್ರಾಯಿಸಿದರು.

ಅವರು ರವಿವಾರ ಮಾ.31 ರಂದು ಕುಮಟಾ ವಿವೇಕನಗರ ವಿಕಾಸ ಸಂಘವು ಶಾರದಾ ನಿಲಯ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ‘ಆರೋಗ್ಯ ಅರಿವು’ ಕಾರ್ಯಕ್ರಮವನ್ನು ಉದ್ಘಾಟಿಸಿ, ‘ಸ್ತನ ಕ್ಯಾನ್ಸರ್’ ಕುರಿತು ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಈ ಕುರಿತು ವಿವರಿಸಿದರು.ನಿಯಮಿತವಾಗಿ ಸ್ವಯಂ ಪರೀಕ್ಷಿಸಿಕೊಳ್ಳುವುದು ಆರೋಗ್ಯಕ್ಕೆ ಮತ್ತು ಮನೋಬಲಕ್ಕೆ ಮಹತ್ವದ ಪಾತ್ರವನ್ನು ವಹಿಸುತ್ತದೆ ಎನ್ನುತ್ತ ಈ ಕ್ರಮಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.ಎಲ್ಲ ವಯಸ್ಸಿನ ಮಹಿಳೆಯರೂ ತಮ್ಮ ಆರೋಗ್ಯದ ಕುರಿತು ಯಾವುದೇ ಸಮಸ್ಯೆಗಳಿದ್ದರೂ ನಿಸ್ಸಂಕೋಚವಾಗಿ ತಜ್ಙವೈದ್ಯರ ಬಳಿ ತಿಳಿಸಿ ಸೂಕ್ತ ಸಲಹೆ ಪಡೆಯಬೇಕೆನ್ನುತ್ತ ಸಭೆಯಲ್ಲಿ ಪಾಲ್ಗೊಂಡ ಮಹಿಳೆಯರು ಕೇಳಿದ ಆರೊಗ್ಯ ಸಮಸ್ಯೆಗಳ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ನೀಡಿದರು.

ಇದೇ ಸಂದರ್ಭದಲ್ಲಿ 80 ವರ್ಷ ಹಾಗೂ ಮೇಲ್ಪಟ್ಟ ವಿವೇಕನಗರದ 25 ಹಿರಿಯ ನಿವಾಸಿಗಳನ್ನು ಸಂಘದ ವತಿಯಿಂದ ಸನ್ಮಾನಿಸುವ ಕಾರ್ಯವನ್ನು ಸಂಘದ ಅಧ್ಯಕ್ಷ ಡಾ.ಎಮ್.ಆರ್.ನಾಯಕ ಹಾಗೂ ಪದಾಧಿಕಾರಿಗಳು ನೆರವೇರಿಸಿದರು. ಸನ್ಮಾನಿತರ ಪರವಾಗಿ ಹಿರಿಯರಾದ ತಿಮ್ಮಣ್ಣ ಹೆಬ್ಬಾರ, ಸುಬ್ರಾಯ ಎನ್.ಗಾಂವಕರ,ನಿವೃತ್ತ ಶಿಕ್ಷಕಿ ನಾಗವೇಣಿ ವೆಂಕಟ್ರಮಣ ಚಿಕ್ಕನಕೋಡು ಅವರು ಮಾತನಾಡಿ ಸಂಘದ ಕಾರ್ಯವನ್ನು ಮೆಚ್ಚಿ ತಮ್ಮ ಅನುಭವ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯಕ ಉಪಸ್ಥಿತರಿದ್ದು ಸಾಂದರ್ಭಿಕ ಮಾತನಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ಎಮ್.ಆರ್.ನಾಯಕ ಆಶಯ ನುಡಿಗಳನ್ನಾಡುತ್ತ ಸಂಘವು ಹಮ್ಮಿಕೊಳ್ಳುವ ವಿವಿಧ ಜನೋಪಯೋಗಿ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿವಾಸಿಗಳು ಪಾಲ್ಗೊಂಡು ಪ್ರೋತ್ಸಾಹಿಸಲು ಕರೆ ನೀಡಿದರು.ಇಂದಿನ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಎಲ್ಲ ಆಮಂತ್ರಿತ ಹಿರಿಯರನ್ನೂ ಅವರವರ ನಿವಾಸಕ್ಕೆ ಸಂಘದ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿ ಗೌರವಯುತವಾಗಿ ಸನ್ಮಾನಿಸುವುದಾಗಿ ಪ್ರಕಟಿಸಿದರು.

ನಿರ್ದೇಶಕ ಅರುಣ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾರ್ಯದರ್ಶಿ ಡಾ.ದಯಾನಂದ ಡಿ.ಭಟ್ಟ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ಆರಂಭದಲ್ಲಿ ಸಂಘದ ನಿರ್ದೇಶಕ ಜಯದೇವ ಬಳಗಂಡಿ ಪ್ರಾರ್ಥಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಎಸ್.ಆಯ್.ನಾಯ್ಕ,ಖಜಾಂಚಿ ವಿ.ವಿ.ಹೊಸಕಟ್ಟಾ,ಸಕ್ರಿಯ ನಿರ್ದೇಶಕರುಗಳಾದ ಸಂಜಯ ಪಂಡಿತ, ಕುಮಾರ್ ಕವರಿ,ಮಹಾಬಲೇಶ್ವರ ಶೇಟ್,ಜನಾರ್ದನ ನಾಯ್ಕ,ಕಾಮೇಶ್ವರ ಭಟ್ಟ,ಮೋಹನ ಗುನಗಾ ಸಹಕರಿಸಿದರು. ವಿವೇಕನಗರದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Exit mobile version