ನಿಯಂತ್ರಣ ತಪ್ಪಿ ಅವಾಂತರ: ಸೇತುವೆ ಕೆಳಬಾಗದ ಹಳ್ಳಕ್ಕೆ ಉರುಳಿದ ಲಾರಿ

ಕುಮಟಾ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಬ್ರಡ್ಜ್ನ ಕೆಳಬಾಗದ ಹಳ್ಳಕ್ಕೆ ಉರುಳಿದ ಘಟನೆ ಕುಮಟಾದಲ್ಲಿ ನಡೆದಿದೆ. ಕುಮಟಾ ಪಟ್ಟಣದ ಮಣಕಿ ಮಾನೀರ್ ದೇವಲಾಯದ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ನಡೆದಿದೆ. ದಾಂಡೇಲಿಯಿಂದ ಕುಮಟಾ ಮರ‍್ಗವಾಗಿ ಮಂಗಳೂರು ಕಡೆ ಸಾಗುತ್ತಿದ್ದ ಭತ್ತದ ಉಮಿ ತುಂಬಿದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಮಣಕಿ ಮಾನೀರ್ ದೇವಲಾಯದ ಸಮೀಪವಿರುವ ಬ್ರಿಡ್ಜ್ನ ಕೆಳಗಿನ ಹಳ್ಳಕ್ಕೆ ಬಿದ್ದಿದೆ. ಅದೃಷ್ಟವಷಾತ್ ಲಾರಿಯ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬುಧವಾರ ರಾತ್ರಿಯ ವೇಳೆ ಈ ಘಟನೆ ನಡೆದಿದ್ದು ತಡರಾತ್ರಿಯಾದ ಕಾರಣ ಇಂದು ಮಧ್ಯಾಹ್ನದ ವೇಳೆಗೆ ಹಳ್ಳದಿಂದ ಲಾರಿಯನ್ನು ಮೇಲೆತ್ತಲಾಗಿದೆ. ಲಾರಿಯು ಹಳ್ಳಕ್ಕೆ ಉರುಳಿದ ಪರಿಣಾಮ ಲಾರಿಯಲ್ಲಿ ತುಂಬಿದ್ದ ಭತ್ತದ ಉಮೆಯು ನೀರುಪಾಲಾಗಿದೆ. ಚಾಲಕನು ಪ್ರಾಣಾಪಾಯದಿಂದ ಪಾರಾಗಿದ್ದು, ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮಟಾ ಮಾನೀರ ದೇವಸ್ಥಾನದ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಮರ‍್ಗವು ಅತ್ಯಂತ ಅಪಾಯಕಾರಿಯಾಗಿದ್ದು, ಐ.ಆರ್.ಬಿ ಯ ಅವೈಜ್ಞಾನಿಕ ಕಾಮಗಾರಿಯಿಂದ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿದೆ ಎಂಬುದು ಸರ‍್ವಜನಿಕರ ಆಕ್ರೋಶವಾಗಿದೆ. ರಸ್ತೆಯನ್ನು ಸಹ ಅವೈಜ್ಞಾನಿಕವಾಗಿ ನರ‍್ಮಿಸಲಾಗಿದ್ದು, ಇಳಿಜಾರಿನಿಂದ ಬಂದ ವಾಹನವು ನಿಯಂತ್ರಣ ತಪ್ಪಿ ಬ್ರಿಡ್ಜ್ನ ಕೆಳಬಾಗಕ್ಕೆ ಉರುಳುವ ಸಾಧ್ಯತೆಗಳೇ ಹೆಚ್ಚಿವೆ. ಇಂತಹ ಅನೇಕ ಘಟನೆಗಳು ಈ ಬಾಗದಲ್ಲಿ ನಡೆದಿದ್ದು, ಈ ಬಗ್ಗೆ ಸಂಬಂದ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಸೂಚನಾ ಫಲಕ, ಹಂಪ್, ಸೇರಿದಂತೆ ಮುಂಜಾಗೃತ ಕ್ರಮ ಕೈಗೊಂಡು ಅಪಘಾತ ಆಗುವುದನ್ನು ನಿಯಂತ್ರಿಸಬೆಕೆಂದು ಸರ‍್ವಜನಿಕರು ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Exit mobile version