ಅಂಕೋಲಾ: ತಾಲೂಕಿನ ದೊಡ್ಡ ದೇವರೆಂದೇ ಖ್ಯಾತಿ ಪಡೆದಿರುವ ಶ್ರೀವೆಂಕಟರಮಣ ದೇವರ ತೇರು ಉತ್ಸವಕ್ಕೆ ಸಿದ್ಧತೆಗಳು ಆರಂಭಗೊoಡಿದ್ದು, ಎಪ್ರಿಲ್ 22ರಂದು ಸಣ್ಣ ತೇರು ಮತ್ತು ಏಪ್ರಿಲ್ 23 ಹನುಮಾನ ಜಯಂತಿ ದಿನದಂದು ದೊಡ್ಡ ತೇರು ಮಹೋತ್ಸವ ನಡೆಯಲಿದೆ . ಜಿಲ್ಲೆಯ ಕಡವಾಡದಿಂದ ಚಂದಾವರ ಸೀಮೆ ವರೆಗಿನ ಅಸಂಖ್ಯ ಭಕ್ತರನ್ನು ಹೊಂದಿರುವ,ಅoಕೋಲಾ ತಾಲೂಕಿನ ದೊಡ್ಡ ದೇವರೇಂ ದೇ ಖ್ಯಾತವಾದ,ಶ್ರೀ ವೆಂಕಟರಮಣ ದೇವರ ತೇರು ಮಹೋತ್ಸವಕ್ಕೆ ಸಿದ್ಧತೆಗಳು ಎಪ್ರಿಲ್ 17 ರ ರಾಮನವಮಿಯಂದು ಆರಂಭಗೊoಡಿದ್ದು,ಚೈತ್ರ ವದ್ಯ ಪ್ರತಿಪದಾ ಬುಧವಾರ ಏಪ್ರಿಲ್ 24ರಂದು ಒಕುಳಿ ಆಟದೊಂದಿಗೆ ಸಂಪನ್ನಗೊಳ್ಳಲಿದೆ.
ತೇರು ಉತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಏಪ್ರಿಲ್ 22 ರಂದು ಸೋಮವಾರ ಚೈತ್ರ ಶುದ್ಧ ಚತುರ್ದಶಿಯ ದಿನ ಮದ್ಯಾಹ್ನ ಸಣ್ಣ ತೇರು ಎಂದು ಕರೆಸಿಕೊಳ್ಳುವ ಪುಷ್ಪ ರಥೋತ್ಸವ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ಏಪ್ರಿಲ್ 23 ರ ಚೈತ್ರ ಪೌರ್ಣಿಮೆಯ ಮಂಗಳವಾರ ಹನುಮ ಜಯಂತಿಯoದು ಶ್ರೀದೇವರ ದೊಡ್ಡ ತೇರು ಎಂದು ಜನಜನಿತವಾಗಿರುವ ಬ್ರಹ್ಮರಥೋತ್ಸವ ಮತ್ತು ಸಂಜೆ ಪಲ್ಲಕಿ ಮೆರವಣಿಗೆ ಮೃಗಭೇಟೆ,ಗರುಡಾವರೋಹಣ ಮತ್ತಿತರ ಕಾರ್ಯಕ್ರಮ ನೆರವೇರಲಿದೆ. ಏಪ್ರಿಲ್ 24 ರಂದು ಬೆಳಿಗ್ಗೆ ದೇವರ ಪಲ್ಲಕಿ ಮೆರವಣಿಗೆ ಬೇಳಾಬಂದರಿಗೆ ತೆರಳಲಿದ್ದು ನೌಕಾವಿಹಾರದೊಂದಿಗೆ ಅಲ್ಲಿ ಓಕುಳಿ ಕಾರ್ಯಕ್ರಮ,ವಿವಿಧ ಸಮಾಜದ ಜನರ ಪೂಜೆ ಸೇವೆ, ಕೇಣಿ ಗಾಬೀತ ಸಮಾಜದ ವಿಶೇಷ ಪೂಜಾ ಸೇವೆ ಜರುಗಲಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ