Big News
Trending

ಕರೊನಾ ಟೆಸ್ಟ್ ಗೆ ಸರ್ಕಾರದಿಂದ ಎಷ್ಟು ಹಣ ಬರುತ್ತೆ? ಜಿಲ್ಲಾಧಿಕಾರಿಗಳು ಹೇಳಿದ್ದೇನು?

ಸುಳ್ಳು ಸುದ್ದಿಗೆ ಕಿವಿಗೋಡಬೇಡಿ
ವದಂತಿ ಹರಡಿದರೆ ಕಠಿಣ ಕ್ರಮದ‌ ಎಚ್ಚರಿಕೆ

[sliders_pack id=”1487″]

ಕಾರವಾರ: ಈಗ ಎಲ್ಲೆಡೆ ಅಂತರರಾಜ್ಯ ಸಂಚಾರ ಸುಗಮಗೊಂಡಿದೆ. ಹೀಗಾಗಿ ಸಹಜವಾಗೇ ಜನರ ಓಡಾಟವು ಹೆಚ್ಚಲಿದ್ದು,,ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಅಲ್ಲದೆ ಸಾರ್ವಜನಿಕರು ಸ್ವ- ಪ್ರೇರಣೆಯಿಂದ ಗಂಟಲು ದ್ರವ ಮಾದರಿ ಪರೀಕ್ಷೆಗೆ ಮುಂದಾಗಬೇಕೆದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್‌ಕುಮಾರ್ ಅವರು ಮಾಹಿತಿ ನೋಡಿದ್ದಾರೆ.

ತಪಾಸಣೆಗೆ ಬಂದವರಿಗೆಲ್ಲ ಪಾಸಿಟಿವ್ ವರದಿ ನೀಡಲಾಗುತ್ತಿದೆ. ಅತಿಹೆಚ್ಚು ಪಾಸಿಟಿವ್ ಪ್ರಕರಣಗಳನ್ನು ದಾಖಲು ಮಾಡಿದರೆ ಅಧಿಕಾರಿಗಳಿಗೆ ಹಣ ಸಿಗುತ್ತದೆ ಎಂಬ ವದಂತಿ ಎಲ್ಲೆಡೆ ಕೇಳಿಬರುತ್ತಿದೆ. ಇದು ಸತ್ಯಕ್ಕೆ ದೂರವಾದದು. ಇದು ಸಂಪೂರ್ಣ ಸುಳ್ಳಿನಿಂದ ಕೂಡಿದೆ. ತಪಾಸಣೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಯಾವ ತಪಾಸಣೆಗೂ ಸರ್ಕಾರದಿಂದ ಹಣ ನೀಡಲಾಗುವುದಿಲ್ಲ. ಇಂತಹ ಸುಳ್ಳು ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು‌.

ಇಂಥ ಸುಳ್ಳು ಸುದ್ದಿಯಿಂದಾಗಿ ಸಾರ್ವಜನಿಕರು ಕರೊನಾ ತಪಾಸಣೆಗೆ ಒಳಪಡಲು ಹಿಂಜರಿಯುತ್ತಿದ್ದಾರೆ. ಸಾಕಷ್ಟು ತಪ್ಪು ಕಲ್ಪನೆಗಳಿಗೆ ಒಳಗಾಗಿದ್ದಾರೆ.
ಇಂತಹ ವದಂತಿಗಳನ್ನು ಹರಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಸೋಂಕಿತರ ಚಿಕಿತ್ಸೆಗೆ ಎಷ್ಟು ಖರ್ಚಾಗಿರುತ್ತದೆಯೋ ಅಷ್ಟನ್ನು ಮಾತ್ರ ನೀಡುತ್ತದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ವೈರಸ್ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.

ವಿಸ್ಮಯ ನ್ಯೂಸ್ ಕಾರವಾರ

Back to top button