
ಗುಣಮುಖ 6 : ಸಕ್ರೀಯ 62
ಸೋಂಕಿತರ ಸಂಪರ್ಕಿತರಿಗೆ ಮುಂದುವರೆದ ನಂಜಿನ ಸರಪಣಿ
ಅಂಕೋಲಾ : ತಾಲೂಕಿನಲ್ಲಿ ಬುಧವಾರ 7 ಹೊಸ ಕೋವಿಡ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಈವರೆಗಿನ ಒಟ್ಟೂ ಸೋಂಕಿತರ ಸಂಖ್ಯೆ 227ಕ್ಕೆ ಏರಿಕೆಯಾಗಿದೆ. ಇಂದು ಗುಣಮುಖರಾದ 6 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು ಒಟ್ಟೂ 62 ಸಕ್ರೀಯ ಪ್ರಕರಣಗಳಿವೆ. ಇಂದು 148 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ.
ಪಟ್ಟಣ ವ್ಯಾಪ್ತಿಯ ಕೋಟೆವಾಡದ 5, ಹುಲಿದೇವರವಾಡದ 2 ಜನರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಇವರು ಈ ಹಿಂದಿನ ಸೋಂಕಿತರ ಸಂಪರ್ಕಿತರು ಎನ್ನಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.