ಶಾಂತಿಕಾ ಪರಮೇಶ್ವರಿ ದೇವರ ಬಂಡಿ ಹಬ್ಬ ಯಶಸ್ವಿಯಾಗಿ ಸಂಪನ್ನ: ಕೆಂಡಹಾಯುವ ಸನ್ನಿವೇಶ ಕಣ್ತುಂಬಿಕೊಂಡ ಭಕ್ತರು
ಕುಮಟಾ: ಗ್ರಾಮ ದೇವಿಯಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವರ ಬಂಡಿ ಹಬ್ಬವು ಅತ್ಯಂತ ವಿಜೃಂಬಣೆಯಿoದ ಸಾವಿರಾರು ಭಕ್ತಾಧಿಗಳ ಕೂಡುವಿಕೆಯಲ್ಲಿ ಸಂಪನ್ನಗೊoಡಿತು. ಶ್ರೀ ದೇವರ ಹಾಗೂ ಪರಿವಾರ ದೇವರುಗಳ ಕಳಶದ ಮೆರವಣಿಗೆ, ಕೆಂಡ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ತಾಲೂಕು ಸೇರಿದಂತೆ ವಿವಿಧ ಭಾಗಳಿಂದ ಆಗಮಿಸಿದ ಭಕ್ತರು ತಾಯಿ ಶಾಂತಿಕಾ ಪರಮೇಶ್ವರಿಯ ದರ್ಶನ ಪಡೆದು ಪುನೀತರಾದರು.
ಊರಿನಲ್ಲಿ ಬರುವ ಅನಿಷ್ಟಗಳು, ಕೌಟುಂಬಿಕ ಸಮಸ್ಯೆಗಳು ಈ ವಾರ್ಷಿಕ ಬಂಡಿಹಬ್ಬದ ಆಚರಣೆಯ ಮೂಲಕ ತೊಲಗಿ ಶಾಂತಿ-ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಭಕ್ತಾದಿಗಳ ಮನದಲ್ಲಿ ನೆಲೆಯೂರಿದೆ. ಬಂಡಿ ಹಬ್ಬದ ವಿಶೇಷವಾಗಿ ಸಹಸ್ರಾರು ಮಹಿಳೆಯರು ಆಗಮಿಸಿ ತಾಯಿಗೆ ಉಡಿಸೇವೆ ಸಲ್ಲಿಸುತ್ತಾರೆ. ನಂತರ ಹೊಸಬ ದೇವರ ಕಳಸ, ಮಾರಿಕಾಂಬ ದೇವರ ಕಳಸ ಹಾಗೂ ಅಮ್ಮನವರ ಕಳಸ ದೇವಸ್ಥಾನದಿಂದ ಹೋರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತದೆ.
ಪಟ್ಟಣದ ಪ್ರಮುಖ ಬಿದಿಗಳಲ್ಲಿ ಕಳಸವು ಸಂಚರಿಸಿ ಪುನಃ ದೇವಸ್ಥನಕ್ಕೆ ಬಂದ ನಂತರ ದೊಡ್ಡ ಪ್ರಮಾಣದಲ್ಲಿ ಕೆಂಡ ಹಾಯುವುದರ ಮೂಲಕ ಗ್ರಾಮದೇವತೆ ಬಂಡಿಹಬ್ಬವು ಪೂರ್ಣಗೊಳ್ಳುತ್ತದೆ. ಅದೇ ರೀತಿ ಈ ವರ್ಷ ಗ್ರಾಮದೇವತೆಯ ವೀಶೇಷವಾದ ವಾರ್ಷಿಕ ಬಂಡಿಹಬ್ಬಕ್ಕೆ ಆಗಮಿಸಿದ ಭಕ್ತ ಸಮೂಹವು ಕೆಂಡಹಾಯುವ ಸನ್ನಿವೇಶವನ್ನು ಕಣ್ತುಂಬಿಕೊoಡರು. ಒಟ್ಟಾರೆ ಕುಮಟಾ ಬಂಡಿ ಹಬ್ಬವು ಅತ್ಯಂತ ವಿಜೃಂಭಣೆಯಿoದ ಸಂಪನ್ನಗೊoಡಿತ್ತು. ಆಗಮಿಸಿದ ಸಹಸ್ರಾರು ಭಕ್ತರು ಶ್ರೀ ದೇವರ ದರ್ಶನ ಪಡೆದು ಪುನೀತರಾದರು. ಕೆಂಡ ಹಾಯುವ ಸನ್ನಿವೇಶವು ಮೈ ಜುಮ್ ಎನಿಸುವಂತಿತ್ತು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ