Focus NewsImportant
Trending

ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ : ಮಹಿಳಾ ತಂಡದ ಸಾಹಸ

30 ರಾಜ್ಯಗಳ, 100 ನಗರಗಳಲ್ಲಿ ಹಾದುಹೋಗುವ ಸಂಕಲ್ಪ

ಕಾರವಾರ: ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿ ಮಾಡುತ್ತಿದ್ದರೂ ಯೋಜನೆ ಲಾಭ ನಿರೀಕ್ಷಿತ ಮಟ್ಟದಲ್ಲಿ ಜನರನ್ನು ತಲುಪುತ್ತಿಲ್ಲ. ಇದರಿಂದ ದೇಶದೆಲ್ಲೆಡೆ ಪರಿಸರ ಮಾಲಿನ್ಯ, ಅಪೌಷ್ಠಿಕತೆ, ಅನಕ್ಷರತೆ, ರಕ್ತ ಹೀನತೆಯಂತಹ ಪ್ರಕರಣಗಳು ಹೆಚ್ಚುತ್ತಲೇ ಇದೆ. ಆದರೆ ಇಂತಹ ಸಮಸ್ಯೆಗಳ ವಿರುದ್ಧ ಜಾಗೃತಿಗೆ ಮುಂದಾಗಿರುವ ಮಹಿಳಾ ಸದಸ್ಯರನ್ನೊಳಗೊಂಡ ಸ್ಕೇಟಿಂಗ್ ತಂಡವೊoದು ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಹೊರಟಿದ್ದು ಈ ಕುರಿತ ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ.

ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಮಗ: ದೊಣ್ಣೆ ಏಟಿಗೆ ಕುಸಿದುಬಿದ್ದು ತಾಯಿ ಸಾವು

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡಜನರ, ಮಹಿಳೆಯರ ಸಶಸ್ತೀಕರಣಕ್ಕೊಸ್ಕರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಲೇ ಇವೆ. ಆದರೆ ನಾನಾ ಕಾರಣಗಳಿಂದ ಅದು ತಲುಪಬೇಕಾದವರನ್ನ ತಲುಪದೇ ಅದೇಷ್ಟೊ ಕಡೆ ಯೊಜನೆಯ ಮೂಲ ಉದ್ದೇಶವೇ ಈಡೇರದಂತಾಗಿದೆ. ಆದರೆ ದೇಶದಲ್ಲಿನ ಇಂತಹ ವಿವಿಧ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಂಬoಧ 20 ರೋಲರ್ ಸ್ಕೇಟರ್ ಗಳು ಕಾಶ್ಮಿರದಿಂದ ಕನ್ಯಾಕುಮಾರಿವರೆಗೆ ಅತುಲ್ಯ ಭಾರತ ರೋಲರ್ ಸೇಟಿಂಗ್ ಸಂಕಲ್ಪಿತ ಯಾತ್ರೆಯೊಂದನ್ನು ಹಮ್ಮಿಕ್ಕೊಂಡಿದ್ದಾರೆ.

10 ಜನ ಮಹಿಳೆಯರು ಹಾಗೂ 10 ಜನ ಪುರಷರನ್ನೊಳಗೊಂಡ ತಂಡ ಈಗಾಗಲೇ ರಾಜಸ್ತಾನ್, ಗುಜರಾತ್, ಮಹಾರಾಷ್ಟç ಗೋವಾ ಮೂಲಕ 3700 ಕಿ.ಮೀ ಕ್ರಮಿಸಿ ಕರ್ನಾಟಕದ ಕಾರವಾರ ಪ್ರವೇಶಿಸಿದೆ. ಸೋನಿ ಚೌರಾಸಿಯ ಅವರ ನೇತೃತ್ವದಲ್ಲಿ ಹೊರಟಿರುವ ರೋಲರ್ ಸ್ಕೇಟರಗಳು ರಸ್ತೆ ಮಧ್ಯೆ ಸಿಗುವ ಹಳ್ಳಿಗಳಿಗೆ ತೆರಳಿ ಜನರಲ್ಲಿ ರಕ್ತಹೀನತೆ ಮುಕ್ತ, ಅಪೌಷ್ಠಿಕತೆ ಮುಕ್ತ ಭಾರತದದ ಬಗ್ಗೆ, ಮಹಿಳಾ ಶಿಕ್ಷಣ ಸೇರದಂತೆ ಇನ್ನಿತರ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಯಾತ್ರೆಯಲ್ಲಿ ಪಾಲ್ಗೊಂಡ ಸ್ಕೇಟರ್.

ಇನ್ನು ಯಾತ್ರೆಯೂ 30 ರಾಜ್ಯಗಳ, 100 ನಗರಗಳಲ್ಲಿ ಹಾದುಹೋಲು ಸಂಕಲ್ಪಿಸಲಾಗಿದೆ. ದಾರಿಯುದ್ದಕ್ಕೂ ಜಾಗೃತಿಗಾಗಿ ಕರ ಪತ್ರಗಳನ್ನು ಹಂಚಲಾಗುತ್ತಿದೆ. ಬೆಳಿಗ್ಗೆ 7 ಗಂಟೆಯಿoದ ಸಂಜೆ 6 ಗಂಟೆವರೆಗೂ ಸ್ಕೇಟಿಂಗ್ ಮೂಲಕವೇ ತೆರಳುವ ತಂಡವೂ ಸಂಜೆ ವಸತಿ ಇದ್ದು ಬೆಳಿಗ್ಗೆ ಪುನಃ ಹೊರಡುತ್ತದೆ. ಧಾರ್ಮಿಕ, ಐತಿಹಾಸಿಕ ಪರಂಪರೆಯ ಪ್ರವಾಸಿ ಸ್ಥಳಗಳಿಗೂ ಭೇಟಿ ನೀಡಿ ಇಂತಹ ಪ್ರದೇಶಗಳಲ್ಲಿ ಪರಿಸರ ಜಾಗೃತಿಗಾಗಿ ಒಂದು ಲಕ್ಷ ಗಿಡಗಳನ್ನು ನೆಡಲಾಗುತ್ತಿದೆ. ಇವರ ಕಾರ್ಯಕ್ಕೆ ಅಖೀಲ ಭಾರತೀಯ ಗ್ರಾಹಕರ ಪಂಚಾಯತ್ ಕರ್ನಾಟಕ ಪ್ರಾಂತ ಸಂಘಟನೆಯಿoದ ನೆರವು ನೀಡಲಾಗುತ್ತಿದೆ.

ಒಳ್ಳೆಯ ಉದ್ದೇಶಕ್ಕೆ ಹೊರಟಿರುವ ಯಾತ್ರೆಗೆ ಎಲ್ಲರಿಂದಲೂ ಬೆಂಬಲ ಸಿಗುತ್ತಿದೆ. ಒಟ್ಟಾರೆ ದೇಶದಲ್ಲಿನ ಪ್ರಮುಖ ಸಮಸ್ಯೆಗಳನ್ನು ಇಟ್ಟುಕೊಂಡು ಮಹಿಳೆಯರ ರೋಲರ್ ಸ್ಕೇಟಿಂಗ್ ತಂಡವೊoದು ವಿಭಿನ್ನ ಪ್ರಯತ್ನದ ಮೂಲಕ ಜಾಗೃತಿ ಮೂಡಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button