ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಮಗ: ದೊಣ್ಣೆ ಏಟಿಗೆ ಕುಸಿದುಬಿದ್ದು ತಾಯಿ ಸಾವು

ಕುಮಟಾ : ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಮಗನ ಹೃದಯವಿದ್ರಾವಕ ಘಟನೆ ತಾಲೂಕಿನ ಮೇಲಿನ ಕೂಜಳ್ಳಿಯ ಬಚ್ಕಡ ಎಂಬಲ್ಲಿ ನಡೆದಿದೆ. ಮಗ ಕುಡಿತದ ಚಟಕ್ಕೆ ದಾಸನಾಗಿದ್ದ ಎಂದು ತಿಳಿದು ಬಂದಿದ್ದು,‌ಮದ್ಯ ಕುಡಿಯಲು ಹಣ ಕೇಳಿದ್ದಕ್ಕೆ ಕೊಡದ ತಾಯಿಯನ್ನೇ ಕೊಲೆ ಮಾಡಿದ್ದಾನೆ .

ಸಮುದ್ರ ದಂಡೆಯ ಮೇಲೆ ಮದ್ಯದ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ: ಅಸ್ವಸ್ಥನಾಗಿ ಬಿದ್ದಿದ್ದ ವ್ಯಕ್ತಿಯ ರಕ್ಷಣೆ

ಗೀತಾ ಭಟ್ (60) ಕೊಲೆಯಾದ ದುರ್ದೈವಿ. ಮಧುಕರ್ ಭಟ್, ತಾಯಿ ಹತ್ಯೆ ಮಾಡಿರುವ ಮಗ ಎನ್ನಲಾಗಿದೆ. ಕುಡಿತದ ಚಟಕ್ಕೆ ದಾಸನಾಗಿದ್ದ ಮಧುಕರ್, ತಾಯಿಗೆ ಮದ್ಯ ಕುಡಿಯೋದಕ್ಕೆ ಹಣ ನೀಡುವಂತೆ ದಿನವೂ ಪೀಡಿಸುತ್ತಿದ್ದ. ಇಂದು ಕೂಡ ಪೀಡಿಸಿ ಜಗಳ ನಡೆಸಿದ್ದು, ಹಣ ನೀಡದ್ದಕ್ಕೆ ಸಿಟ್ಟಿನಲ್ಲಿ ತಾಯಿಯ ತಲೆಯ ಮೇಲೆ ರೀಪಿನ ತುಂಡು ಮತ್ತು ಇತರ ಕಟ್ಟಿಗೆ ದೊಣ್ಣೆಯಿಂದ ಹೊಡೆದಿದ್ದಾನೆ.

ದೊಣ್ಣೆಯ ಏಟಿಗೆ ತಾಯಿ ಗೀತಾ ಕುಸಿದು ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಮಗನಿಗೆ ತಂದೆ ಕೂಡ ಬೆಂಬಲ ನೀಡುತ್ತಿದ್ದ ಎಂದು ಊರಿನವರು ದೂರಿದ್ದು, ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತಂದೆ-ಮಗ ಇಬ್ಬರನ್ನೂ ಠಾಣೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್ ಕುಮಟಾ

Exit mobile version