
ಕುಮಟಾ; ತಾಲೂಕಿನಲ್ಲಿ ಇಂದು 4 ಕರೋನಾ ಕೇಸ್ ದೃಢಪಟ್ಟಿದೆ. ತಾಲೂಕಿನ ಹಿರೇಗುತ್ತಿ, ಹಳಕಾರ, ನಾಡುಮಾಸ್ಕೇರಿ, ಹಾಗೂ ಕುಮಟಾ ಪಟ್ಟಣದಲ್ಲಿ ಸೇರಿದಂತೆ ತಲಾ ಒಂದೊoದು ಪ್ರಕರಣ ದಾಖಲಾಗಿದೆ.
ಹಿರೇಗುತ್ತಿಯ 28 ವರ್ಷದ ಪುರುಷ, ಹಳಕಾರದ 24 ವರ್ಷದ ಪುರುಷ, ನಾಡುಮಾಸ್ಕೇರಿಯ 30 ವರ್ಷದ ಮಹಿಳೆ, ಕುಮಟಾದ 43 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇಂದು 4 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1694ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ ಎರಡು ಪಾಸಿಟಿವ್:
ಹೊನ್ನಾವರ: ತಾಲೂಕಿನಲ್ಲಿ ಇಂದು ಇಬ್ಬರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ತಾಲೂಕಿನ ಕಡತೋಕಾದ ಇಬ್ಬರಿಗೆ ಪಾಸಿಟಿವ್ ಬಂದಿದೆ. ಕಡತೋಕಾದ 73 ವರ್ಷದ ಮಹಿಳೆ, 52 ವರ್ಷದ ಮಹಿಳೆ ಸೇರಿ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು ಒಟ್ಟು 8 ಜನರು ಡಿಸ್ಚಾರ್ಜ್ ಆಗಲಿದ್ದಾರೆ.
ವಿಸ್ಮಯ ನ್ಯೂಸ್ ನಾಗೇಶ ದೀವಗಿ, ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ