ಪೊಲೀಸ್ ಠಾಣೆಯ ಹವಾಲ್ದಾರ್ ಅಕಾಲಿಕ ನಿಧನ

ಅಂಕೋಲಾ : ತಾಲೂಕಿನ ಕೆಳಗಿನ ಮಂಜುಗುಣಿ ಮೂಲದ, ಹಾಲಿ ಅದೇ ಗ್ರಾಮದ ವಿದ್ಯಾನಗರದಲ್ಲಿ ವಾಸವಿದ್ದ ರವಿ ಹೂವಾ ತಾಂಡೇಲ (43 ) ಅಕಾಲಿಕವಾಗಿ ನಿಧನರಾಗಿದ್ದಾರೆ.ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಹವಾಲ್ದಾರ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಕಳೆದ ಕೆಲ ಕಾಲದಿಂದ ಅನಾರೋಗ್ಯ ಸಮಸ್ಯೆಯಿಂದ ಜಿಲ್ಲೆ ಹಾಗೂ ಹೊರ ರಾಜ್ಯದಲ್ಲಿಯೂ ಚಿಕಿತ್ಸೆ ಪಡೆದು, ನಂತರ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೇ 26 ರಂದು ಕೊನೆಯುಸಿರೆಳೆದಿದ್ದಾರೆ.

ರಾಜ್ಯ ರಾಜಧಾನಿಯಿಂದ ಅವರ ಮೃತ ದೇಹವನ್ನು ಮೇ 27 ರ ಬೆಳಿಗ್ಗೆ ಹುಟ್ಟೂರು ಅಂಕೋಲಾದ ಮಂಜುಗುಣಿಗೆ ತಂದು ಅಲ್ಲಿ ಯಲ್ಲಾಪುರ ಹಾಗೂ ಅಂಕೋಲಾ ಪೊಲೀಸ್ ಠಾಣೆಗಳ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರಕಾರಿ ಗೌರವ ಸಲ್ಲಿಸಿದ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.ಮೃತನ ಕುಟುಂಬಸ್ಥರು, ಬಂಧು – ಬಾಂಧವರು,ಸಮಾಜದವರು ಹಾಗೂ,ಊರ ನಾಗರಿಕರು ಮತ್ತಿತರರು ಸೇರಿದಂತೆ ನೂರಾರು ಜನ ಮೃತರ ಅಂತಿಮ ದರ್ಶನ ಪಡೆದುಕೊಂಡರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version