ಸಿಲೆಂಡರನಿಂದ ಗ್ಯಾಸ್ ಸೋರಿಕೆ: ಸಮಯ ಪ್ರಜ್ಞೆ ಮೆರೆದ ಮನೆಮಗ ಸ್ವಲ್ಪದರಲ್ಲೇ ತಪ್ಪಿತು ಭಾರೀ ಅನಾಹುತ
ಅಂಕೋಲಾ: ತಾಲೂಕಿನ ತೆಂಕಣಕೇರಿಯ ಮನೆಯ ಅಡುಗೆ ಕೋಣೆಯಲ್ಲಿದ್ದ ಸಿಲಿಂಡರ್ ನಲ್ಲಿ ಆಕಸ್ಮಿಕವಾಗಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ, ಕುಟುಂಬಸ್ಥರು ಮತ್ತು ಅಕ್ಕಪಕ್ಕದ ಮನೆಯವರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿತ್ತು. ತೆಂಕಣಕೇರಿ ಗ್ರಾಮದಲ್ಲಿ ಬಂಡಿಹಬ್ಬ ಮತ್ತಿತರ ಕಾರಣಗಳಿಂದ,ಸ್ವಲ್ಪ ಟ್ರಾಫಿಕ್ ಜಾಮ್ ಸಹ ಸಾಗಿ ಅಗ್ನಿಶಾಮಕ ವಾಹನ ನಿಗದಿತ ಸ್ಥಳ ತಲುಪಲು ಕೊಂಚ ವಿಳಂಬವಾಗುವoತಾಗಿತ್ತು.
ಈ ವೇಳೆಗಾಗಲೇ ತಮ್ಮ ಮನೆಯ ಸಿಲೆಂಡರಿನಿoದ ಬೆಂಕಿಯ ಕೆನ್ನಾಲಿಗೆ ಅಡುಗೆ ಕೋಣೆಯ ಮೇಲ್ಪಾವಣಿಗೆ ತಗುಲುವ ಸಾಧ್ಯತೆ ಮನಗಂಡ, ಮನೆಯ ಮಗನೊಬ್ಬ, ಧೈರ್ಯದಿಂದ ಮುನ್ನುಗ್ಗಿ ಅಡುಗೆ ಕೋಣೆಯ ಕಿಟಕಿ ಬಾಗಿಲುಗಳನ್ನು ಪೂರ್ತಿ ತೆರೆದು, ಬೆಂಕಿ ತಗುಲಿಕೊಂಡಿದ್ದ ಸಿಲೆಂಡರ ಮೇಲೆ, ನೀರಿನಿಂದ ಅದ್ದಿ ಒದ್ದೆ ಮಾಡಿದ ಗೋಣಿ ಚೀಲಗಳನ್ನು ಸರಿಯಾಗಿ ಹಾಕಿ, ಗಾಳಿಯಾಡದಂತೆ ಸುತ್ತಿ,ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದರು.
ಈ ವೇಳೆ ಸ್ಥಳಕ್ಕೆ ಬಂದು ತಲುಪಿದ್ದ ಅಗ್ನಿಶಾಮಕ ದಳದವರು,ಬೆಂಕಿ ತಗುಲಿ ಬಿಸಿಯಾಗಿದ್ದ ಗ್ಯಾಸ್ ಸಿಲಿಂಡರ್ ನ್ನು ಹೊರತಂದು ಅದರ ಮೇಲೆ ನೀರು ಸುರಿದು, ಶಾಖದ ತೀವ್ರತೆ ಕಡಿಮೆ ಮಾಡಿ ಸಂಭವನೀಯ ಅಪಾಯದ ಆತಂಕ ದೂರಮಾಡಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ