Follow Us On

WhatsApp Group
Important
Trending

ಅಪಘಾತದಲ್ಲಿ ಸಾವು: ಅಪರಿಚಿತನ ಗುರುತು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಕುಮಟಾ: ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಅಪರಿಚಿತ ವೃದ್ಧನಿಗೆ ಡಿಕ್ಕಿ ಹೊಡೆದ ಪರಿಣಾಮ ತೀವೃವಾಗಿ ಗಾಯಗೊಂಡ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಘಟನೆ ಕುಮಟಾದಲ್ಲಿ ನಡೆದಿದೆ. ಇದುವರೆಗೆ ಮೃತ ಅಪರಿಚಿತ ವ್ಯಕ್ತಿಯ ಕುಟುಂಬಸ್ಥರಾಗಲಿ, ಪರಿಚಯಸ್ಥರ ಕುರಿತಾಗಿ ಯಾವುದೇ ಮಾಹಿತಿ ತಿಳಿದಿಲ್ಲವಾಗಿದ್ದು, ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಅಪರಿಚಿತ ವ್ಯಕ್ತಿಯ ರಕ್ತ ಸಂಬoಧಿಗಳ ಪತ್ತೆಗಾಗಿ ಸಾರ್ವಜನಿಕ ಪ್ರಕಟನೆ ಹೊರಡಿಸಿದ್ದಾರೆ.

ಕುಮಟಾದ ಹೊಲನಗದ್ದೆ ಗಾಂಧಿವನ ಪಕ್ಕದ ವನ್ನಳ್ಳಿ ಕ್ರಾಸ್ ಹತ್ತಿರ ಅಘನಾಶಿನಿ ಕಡೆಯಿಂದ ಕುಮಟಾಕ್ಕೆ ಸಾಗುತ್ತಿದ್ದ ಬಸ್ ವೃದ್ಧನಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಸ್ವರೂಪದ ಗಾಯಗಳಾಗಿ ಕುಮಟಾ ಸರ್ಕಾರಿ ಆಸ್ಪತ್ರೆಯಲಕ್ಲಿ ಉಪಚಾರದಲ್ಲಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ, ಮೃತಪಟ್ಟಿದ್ದಾರೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Back to top button