Big News
Trending

ಅಕ್ರಮ ಗೋಸಾಗಾಟ ತಡೆಯುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ: ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ: ತಾಲೂಕಿನ ಆಡಳಿತ ಸೌಧದ ಎದುರು ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಳ ಹಾಗೂ ಹಿಂದೂಪರ ಸಂಘಟನೆಗಳು ಇಂದು ಭಟ್ಕಳದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಎನ್ನಲಾಗುತ್ತಿರುವ ಅಕ್ರಮ ಗೋಸಾಗಾಟ ತಡೆಗಟ್ಟುವಂತೆ ಒತ್ತಾಯಿಸಿ ಬ್ರಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಚೆಕ್ ಪೋಸ್ಟ್ ಗಳನ್ನು ಭದ್ರಪಡಿಸುವಂತೆ ಒತ್ತಾಯಿಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನಿಲ್ ನಾಯ್ಕ ಮಾತನಾಡಿ ಸಚಿವ ಮಂಕಾಳ ವೈದ್ಯ ಭಟ್ಕಳದಾದ್ಯಂತ ಇರುವ ಎಲ್ಲಾ ಚೆಕ್ ಪೋಸ್ಟ್ ಗಳನ್ನು ಬಂದ್ ಮಾಡುವ ಮೂಲಕ ಗೋಕಳ್ಳತನಕ್ಕೆ ಸಹಕರಿಸುತ್ತಿದ್ದಾರೆಂದು ಗಂಬೀರ ಆರೋಪ ಮಾಡಿದರು. ಅಧಿಕಾರಿಗಳು ಸಚಿವರ ಕೈಗೊಂಬೆಯಂತೆ ವರ್ತಿಸಿ ಕೆಲಸಮಾಡಬಾರದು, ಮುಂದಿನ ದಿನಗಳಲ್ಲಿ ನಾಲ್ಕು ಚೆಕ್ ಪೋಸ್ಟ್ ಗಳನ್ನು 24 ಗಂಟೆ ಸಿಸಿ ಕ್ಯಾಮರಾ ಅಳವಡಿಸಿ ಕಾರ್ಯನಿರ್ವಹಿಸುವಂತ ಮಾಡಬೇಕು ಎಂದು ಆಗ್ರಹಿಸಿದರು.

ಇನ್ನೂ ಪಶ್ಚಿಮ ಘಟ್ಟಗಳ ಸಂರಕ್ಷಣ ಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ ಈಗಾಗಲೇ ಸಾವಿರಾರು ಗೋವುಗಳನ್ನು ಪಟ್ಟಣದಲ್ಲಿ ಕೂಡಿಹಾಕಲಾಗಿದೆ. ಇದಕ್ಕೆಲ್ಲಾ ರಾಜ್ಯ ಸರ್ಕಾರ ಮತ್ತು ಇಲ್ಲಿಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಇಲ್ಲಿಯ ಅಧಿಕಾರಿ ವರ್ಗ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ನೀವು ಅಕ್ರಮ ಗೋಸಾಗಾಟವನ್ನು ತಡೆಯದಿದ್ದರೆ ನಮ್ಮ ಕಾರ್ಯಕ್ರರ್ತರು ನೇರವಾಗಿ ಅದನ್ನು ತಡೆಯುವ ಕೆಲಸ ಮಾಡಬೇಕಾಗುತ್ತದೆ,

ಈ ಸಂದರ್ಭದಲ್ಲಿ ನಮಗೆ ಯಾವುದೇ ರೀತಿಯ ಅನಾಹುತವಾದರೂ ನಾವು ಅನುಭವಿಸಲು ಸಿದ್ಧವಾಗಿದ್ದೆವೆ, ಇಂತಹ ಸಾಕಷ್ಟು ಸಂಕಷ್ಟಗಳನ್ನು ಅದಾಗಲೇ ನಾವು ಅನುಭವಿಸಿದ್ದೇವೆ ಎಂದರು. ಈ ಹಿಂದೆ ಗೋ ಸಂರಕ್ಷಣೆ ಮಾಡಿ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ ಪ್ರಕರಣದಲ್ಲಿ ನಮ್ಮ ಕಾರ್ಯಕ್ರರ್ತರನ್ನು ಏಕವಚನದಲ್ಲಿ ಏನು ಬೇಕಾದ್ರೂ ಮಾಡಿ ಎಂಬ ಉದ್ಧಟತನದ ಮಾತನ್ನು ಅಧಿಕಾರಿಗಳು ಹೇಳಿದ್ದು ಖಂಡನೀಯ, ಆದಷ್ಟು ಬೇಗ ಪೋಲಿಸ್ ವರಿಷ್ಠಾಧಿಕಾರಿಗಳು ಭಟ್ಕಳದ ಪ್ರಮುಖ ಚೆಕ್ ಪೋಸ್ಟ್ ಗಳನ್ನು ಭದ್ರಪಡಿಸಿಬೇಕು ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ನೀವೆ ಜವಾಬ್ಧಾರರಾಗಬೇಕಾಗುತ್ತದೆ ಎಂದು ಗುಡುಗಿದರು.

ಈ ನಡುವೆ ಪ್ರತಿಭಟನಾಕಾರರು ಮತ್ತು ಡಿವೈಎಸ್ಪಿ ಮಹೇಶ್ ಎಮ್ ಕೆ ನಡುವೆ ಮಾತಿನ ಚಕಮಕಿ ಎರ್ಪಟ್ಟು ಕೆಲಕಾಲ ಬಿಗುವಿನ ವಾತಾವರಣ ಸೃಷ್ಠಿಯಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ, ಶ್ರೀಕಾಂತ ನಾಯ್ಕ, ಸುಬ್ರಾಯ್ ದೇವಾಡಿಗ, ಶ್ರೀನಿವಾಸ ನಾಯ್ಕ, ರಾಮ ಖಾರ್ವಿ, ಈಶ್ವರ್ ನಾಯ್ಕ, ಸುರೇಶ ನಾಯ್ಕ ಕೊಣೆಮನೆ ಮತ್ತಿತರು ಇದ್ದರು.

ವಿಸ್ಮಯ ನ್ಯೂಸ್, ಈಶ್ವರ ನಾಯ್ಕ, ಭಟ್ಕಳ

Back to top button