Focus News
Trending

ಪ್ರಧಾನಿ ಜನ್ಮ ದಿನಾಚರಣೆ ಪ್ರಯುಕ್ತ ಸೇವಾ ಪಾಕ್ಷಿಕ : ಬಿಜೆಪಿ ರೈತ ಮೋರ್ಚಾದಿಂದ ವಿಭೂತಿ ಫಾಲ್ಸ್  ಸುತ್ತ ಮುತ್ತ ಸ್ವಚ್ಛತಾ ಕಾರ್ಯ

ಯುವ ಮೋರ್ಚಾದಿಂದ ರಕ್ತದಾನ ಶಿಬಿರ

ಅಂಕೋಲಾ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಭಾರತೀಯ ಜನತಾ ಪಕ್ಷದ ಸೇವಾ ಪಾಕ್ಷಿಕದ ಅಂಗವಾಗಿ ಭಾರತೀಯ ಜನತಾ ಪಕ್ಷದ ಅಂಕೋಲಾ ಮಂಡಲದ ರೈತ ಮೋರ್ಛಾ ಘಟಕದ ವತಿಯಿಂದ ಪ್ರವಾಸಿ ತಾಣ ವಿಭೂತಿ ಪಾಲ್ಸ್ ಬಳಿ  ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ವಿಭೂತಿ ಪಾಲ್ಸ್ ಸುತ್ತ ಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಿದ ಬಿಜೆಪಿ ಕಾರ್ಯಕರ್ತರು ಪ್ರವಾಸಿಗರು ಎಸೆದು ಹೋದ ಪ್ಲಾಸ್ಟಿಕ್ ಬಾಟಲಿ ಮತ್ತಿತರ ತ್ಯಾಜ್ಯಗಳನ್ನು ಆಯ್ದು ಕಸವನ್ನು ಚೆಲ್ಲದಂತೆ ಪ್ರವಾಸಿಗರಲ್ಲಿ ಮನವಿ ಮಾಡಿದರು. 

36 ಸಾವಿರ ಆರಂಭಿಕ ವೇತನ: SBI ನಲ್ಲಿ 1,673 ಹುದ್ದೆಗಳು ಖಾಲಿ: ಇಂದೇ ಅರ್ಜಿ ಸಲ್ಲಿಸಿ

ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ,   ರೈತ ಮೋರ್ಛಾ ಅಧ್ಯಕ್ಷ ವಿ.ಎಸ್. ಭಟ್ಟ ಕಲ್ಲೇಶ್ವರ, ಜಿಲ್ಲಾ ಕಾರ್ಯದರ್ಶಿ ನಿತ್ಯಾನಂದ ಗಾಂವಕರ್ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ  ರಾಘವೇಂದ್ರ ಭಟ್ಟ, ಜಿಲ್ಲಾ ಪ್ರಭಾರಿ ಜಗದೀಶ ನಾಯಕ ಮೊಗಟಾ, ಅಚವೆ ಶಕ್ತಿ ಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ನಾಯಕ, ಅಚವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಪಟಗಾರ, ಡೋಂಗ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ನಾಯ್ಕ,  ಪ್ರಮುಖರುಗಳಾದ ಉದಯ ಗುನಗಾ, ಚಂದ್ರಕಾಂತ ನಾಯ್ಕ, ಬಾಲಕೃಷ್ಣ ನಾಯ್ಕ, ನಂದು ಗಾಂವಕರ, ಗಜೇಂದ್ರ , ಸುಬ್ರಹ್ಮಣ್ಯ ಗಾಂವಕರ್, ನಾಗರಾಜ ನಾಯ್ಕ, ಲತೀಶ ನಾಯ್ಕ, ಅಚವೆ, ಡೋಂಗ್ರಿ ಗ್ರಾಮ ಪಂಚಾಯಿತಿ ಸದಸ್ಯರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ರಕ್ತದಾನ ಸೇವಾ ಪಾಕ್ಷಿಕದ ಅಂಗವಾಗಿ ಅಂಕೋಲಾ ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಯುವ ಮೋರ್ಛಾ ಘಟಕದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು ಬಿಜೆಪಿ ಕಾರ್ಯಕರ್ತರು ವಿವಿಧ ಶಕ್ತಿ ಕೇಂದ್ರಗಳ ಪ್ರಮುಖರು ಆಗಮಿಸಿ ರಕ್ತದಾನ ಮಾಡಿದರು.  40 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಗಮನ ಸೆಳೆದರು. ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button