Important
Trending

ಸೂಕ್ಷ್ಮ ಪ್ರದೇಶದಲ್ಲಿ ರಾತ್ರಿಗಸ್ತು ಆರಂಭಿಸಿದ ಮಹಿಳಾ ಪೊಲೀಸ್ ಸಿಬ್ಬಂದಿ: ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ರಾತ್ರಿ ಗಸ್ತು

ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ

ಶಿರಸಿ: ನಗರದಲ್ಲಿ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿಗಳಿoದ ರಾತ್ರಿ ಗಸ್ತು ಕರ್ತವ್ಯ ಆರಂಭಿಸಲಾಗಿದೆ. ಡಿಎಸ್ಪಿ ರವಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಅಪರಾಧ ವಿಭಾಗದ ಪಿಎಸ್ಐ ಕುಮಾರಿ ರತ್ನ ಕುರಿ ಇವರ ನೇತೃತ್ವದಲ್ಲಿ ನಗರ ಠಾಣೆಯ ಮಹಿಳಾ ಸಿಬ್ಬಂದಿಗಳು ಕರ್ತವ್ಯ ಆರಂಭಿಸಿದ್ದಾರೆ.

36 ಸಾವಿರ ಆರಂಭಿಕ ವೇತನ: SBI ನಲ್ಲಿ 1,673 ಹುದ್ದೆಗಳು ಖಾಲಿ: ಇಂದೇ ಅರ್ಜಿ ಸಲ್ಲಿಸಿ

ರಾತ್ರಿ 10 ಗಂಟೆಯಿoದ ಬೆಳಗಿನ ಜಾವ 5 ಗಂಟೆಯವರೆಗೆ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಿ ಅನುಮಾನಸ್ಪದ ವಾಹನಗಳ ತಪಾಸಣೆ ನಡೆಸಿದ್ದಾರೆ. ಈ ಸಮಯದಲ್ಲಿ ಒಂದು ಗಂಟೆಯ ಕಾಲ ಶಿರಸಿ ನಗರ ವ್ಯಾಪ್ತಿಯ ನೀಲೆಕಣಿ ಚೆಕ್ ಪೋಸ್ಟ್ ನಲ್ಲಿ ವಾಹನಗಳ ವಿಶೇಷ ತಪಾಸಣೆಯನ್ನು ಕೂಡ ಮಾಡಿದ್ದಾರೆ.

Women police

ಉತ್ತರ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಸಿಬ್ಬಂದಿಗಳಲ್ಲಿ ನಾವು ಕೂಡ ಯಾರಿಗೂ ಕಮ್ಮಿ ಇಲ್ಲ ಎನ್ನುವ ಒಂದು ಸಂದೇಶವನ್ನು ಸಮಾಜ ಘಾತುಕರಿಗೆ ಹಾಗೂ ಅಪರಾಧಿಗಳಿಗೆ ಸಂದೇಶವನ್ನು ಮುಟ್ಟಿಸುವ ನಿಟ್ಟಿನಲ್ಲಿ ಧೈರ್ಯವಾಗಿ ರಾತ್ರಿಯ ಸಮಯದಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿದ್ದು ಸಾರ್ವಜನಿಕ ಶ್ಲಾಘನೆಗೆ ಕಾರಣವಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Related Articles

Back to top button