Important
Trending

ಜಿಂಕೆ ಬೇಟೆ: ಆರು ಆರೋಪಿಗಳ ಬಂಧನ

ಯಲ್ಲಾಪುರ: ಜಿಂಕೆಯನ್ನು ಬೇಟೆಯಾಡಿದ ಆರೋಪದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಿಂಕೆ ಬೇಟೆಯಾಡಿದ ಆರು ಜನರನ್ನು ಬಂಧಿಸಿದ್ದಾರೆ. ಬೇಟೆಗೆ ಬಳಸಿದ ಬಂದೂಕು, ಎರಡು ಕಾರು, ಹಾಗೂ ಜಿಂಕೆ ಮಾಂಸ ವಶಪಡಿಸಿಕೊಂಡ ಘಟನೆ ಯಲ್ಲಾಪುರದಲ್ಲಿ ನಡೆದಿದೆ.

ಉದ್ಯಮ ನಗರದ ರುಸ್ತುಂ ಅಟೇಲಸಾಬ ಬೇಪಾರಿ, ಶಬ್ಬಿರ ರುಸ್ತಂ ಶೇಖ ಬೇಫಾರಿ, ಕಾಳಮ್ಮನಗರದ ಮಹಮ್ಮದ ರಫೀಕ ಇಮಾಮಸಾಬ ಯಳ್ಳೂರ, ಕರೀಂ ಖಾದರಸಾಬ ಶೇಖ, ಮಹಮ್ಮದ ಶಫಿ ಖಾದರಸಾಬ ಶೇಖ, ಸತೀಶ ಪರಮೇಶ್ವರ ನಾಯ್ಕ ಜನಕಲಜಡ್ಡಿ ಚಂದಗುಳಿ ಗ್ರಾಮ, ಉದ್ಯಮ ನಗರದ ಪ್ರಶಾಂತ ಮಂಜುನಾಥ ನಾಯ್ಕ ಬಂಧಿತ ಆರೋಪಿಗಳಾಗಿದ್ದಾರೆ.

ಯಲ್ಲಾಪುರ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಈ ಕುರಿತು ಖಚಿತ ಮಾಹಿತಿ ಬಂದಿತ್ತು. ಹೀಗಾಗಿ ದಾಳಿಗಿಳಿದ ಅಧಿಕಾರಿಗಳು ಗ್ರಾಮದ ಜನಕಲಜಡ್ಡಿ ಸತೀಶ ಪರಮೇಶ್ವರ ನಾಯ್ಕ, ಇವರ ಮನೆಯನ್ನು ಶನಿವಾರ ಬೆಳಗಿನ ಜಾವ ತಪಾಸಣೆ ಮಾಡಿದ್ದು, ಜಿಂಕೆ ಮಾಂಸ ಹಾಗೂ ಅನಧಿಕೃತವಾದ ಬಂದೂಕು ಪತ್ತೆಯಾಗಿದೆ. ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button