Big News
Trending

ಜನಾರ್ಧನ ಕುಂಭಾಶಿಗೆ ನಿನಾದ ಕೋಗಿಲೆ ಪ್ರಶಸ್ತಿ ಪ್ರಧಾನ

ಭಟ್ಕಳ- ಲಾಕ್ಡೌನ್ ಸಮಯದಲ್ಲಿ ತೆರೆಮರೆಯಲ್ಲಿದ್ದ ಗಾಯಕರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಭಟ್ಕಳದ ನಿನಾದ ಸಾಹಿತ್ಯ ಸಂಗೀತ ಸಂಚಯ ಸಂಘಟನೆ ನಿನಾದ ರಾಜ್ಯಮಟ್ಟದ ಅಂತರ್ಜಾಲ ಭಾವಗೀತ ಗಾಯನ ಸ್ಪರ್ಧೆ ಆಯೋಜನೆ ಮಾಡಿತ್ತು.
ರಾಜ್ಯದ ನಾನಾ ಮೂಲೆಗಳಿಂದ ಈ ಸ್ಪರ್ಧೆಯಲ್ಲಿ 200 ಕ್ಕೂ ಅಧಿಕ ಜನರು ಭಾಗವಹಿಸಿದ್ದು ಈ ಸ್ಪರ್ಧೆಯಲ್ಲಿ ಪ್ರಥಮ ಸ್ನಾನವನ್ನು ಕುಂದಾಪುರದ ಜನಾರ್ಧನ ಕುಂಭಾಶಿ ಪಡೆದುಕೊಂಡಿದ್ದರು.


ಕುಂಭಾಶಿಯ ಚಂಡಿಕಾ ದುರ್ಗಾಪರಮೇಶ್ವರಿ ಕ್ಷೇತ್ರದ ಸಭಾಭವನದಲ್ಲಿ ಗುರುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಊರಿನ ಆಪ್ತರ ಸಮ್ಮುಖದಲ್ಲಿ ಗಾಯಕ ಜನಾರ್ಧನ ಕುಂಭಾಶಿಯವರಿಗೆ ನಿನಾದ ಕೋಗಿಲೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಮ್ಮ ಸಂಘಟನೆ ಕಳೆದ ಮೂರುನಾಲ್ಕು ವರ್ಷದಿಂದ ಸಂಗೀತ ಸಾಹಿತ್ಯ ಕ್ಷೇತ್ರದಲ್ಲಿ ಬೆಳಗುತ್ತಿರುವ ಅನೇಕ ಯುವಕರಿಗೆ ಪ್ರೋತ್ಸಾಹ ಮಾಡುತ್ತಿದ್ದು ಇಂದು ಜನಾರ್ಧನ ಕುಂಭಾಶಿಯವರ ಕಲೆಯನ್ನು ರಾಜ್ಯಕ್ಕೆ ಪರಿಚಯಿಸುವ ಸಣ್ಣ ಪ್ರಯತ್ನ ಮಾಡಲಾಗಿದ್ದು ಮುಂದೆ ಇವರು ಇನ್ನಷ್ಟು ಪ್ರಸಿದ್ದಿಗೆ ಬರುವಂತಾಗಲಿ ಎಂದು ನಿನಾದದ ಸಂಚಾಲಕ ಸಾಹಿತಿ ಉಮೇಶ ಮುಂಡಳ್ಳಿ ನುಡಿದರು. ನಿನಾದ ಇನ್ನೂ ಕೆಲವೆ ದಿನಗಳಲ್ಲಿ ರಾಜ್ಯಮಟ್ಟದ ಅಂತರ್ಜಾಲ ಕಾವ್ಯವಾಚನ ಸ್ಪರ್ಧೆಯನ್ನು ಆಯೋಜನೆ ಮಾಡುವುದಾಗಿಯು ಈ ಸಂದರ್ಭದಲ್ಲಿ ತಿಳಿಸಿದರು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜನಾರ್ದನ ಅವರು ನಾನೊಬ್ಬ ಗ್ರಾಮೀಣ ಭಾಗದ ವ್ಯಕ್ತಿಯಾಗಿದ್ದು ಮನಸ್ಸಿನ ಖುಷಿಗಾಗಿ ಹಾಡುತ್ತ ಇದ್ದವ. ಸರಕಾರದ ಯಾವುದೇ ಸಹಾಯ ಇಲ್ಲದೆಯೂ ತಮ್ಮದೇ ಸ್ವಂತ ಖರ್ಚಿನಲ್ಲಿ
ನನ್ನಂತವನ ಪ್ರತಿಭೆಯನ್ನು ರಾಜ್ಯಮಟ್ಟದಲ್ಲಿ ಬೆಳಕಿಗೆ ತಂದಿದ್ದು, ನನ್ನಂತ ಅನೇಕರಿಗೆ ಪ್ರೋತ್ಸಾಹ ನೀಡುತ್ತಿರುವ ನಿನಾದ ಸಾಹಿತ್ಯ ಸಂಗೀತ ಸಂಚಯದ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯದರ್ಶಿ ಮಹೇಶ ನಾಯ್ಕ ಮುರುಡೇಶ್ವರ ಎಲ್ಲರನ್ನೂ ಸ್ವಾಗತಿಸಿದರು. ಸದಸ್ಯರಾದ ಗೋಪಾಲ ನಾಯ್ಕ ಉಪಸ್ಥಿತರಿದ್ದರು

Back to top button