ಭಟ್ಕಳ: ತಲಗೋಡ್ ಗ್ರಾಮದ ಸ್ಮಶಾನಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ಇರುವ ಹಿನ್ನೆಲೆಯಲ್ಲಿ ಇಲ್ಲಿನ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘವು ಭಾನುವಾರ ಬೆಳಿಗ್ಗೆ ಶ್ರಮದಾನ ಮಾಡುವ ಮೂಲಕ ಸ್ಮಶಾನಕ್ಕೆ ರಸ್ತೆ ಸಂಪರ್ಕವನ್ನು ಕಲ್ಪಿಸಿದೆ.
ಬೆಳಿಗ್ಗೆ 8 ಗಂಟೆಗೆ ಕತ್ತಿ ಹಾರೆ ಮುಂತಾದ ಸಲಕರಣೆಗಳ ಸಮೇತ ಆಗಮಿಸಿದ ಗ್ರಾಮಸ್ಥರು ಗಿಡಗಂಟಿಗಳಿಂದ ಮುಚ್ಚಿಕೊಂಡಿದ್ದ ಜಾಗವನ್ನು ಸ್ವಚ್ಛಗೊಳಿಸಿ, ಕೆಂಪು ಮಣ್ಣು ಸುರಿದು ರಸ್ತೆ ನಿರ್ಮಾಣ ಮಾಡಿದರು. ಅಂದಹಾಗೇ ನೂರಾರು ಕುಟುಂಬಗಳು ವಾಸವಾಗಿರುವ ಈ ಭಾಗದಲ್ಲಿರುವ ಸ್ಮಶಾನಕ್ಕೆ ರಸ್ತೆ ಸಂಪರ್ಕವಿಲ್ಲದೆ, ಊರಲ್ಲಿ ಯಾರಾದರೂ ಮರಣ ಹೊಂದಿದರೆ. ಸೌದೆ ಮುಂತಾದ ವಸ್ತುಗಳನ್ನು ಹೊತ್ತು ಸಾಗಬೇಕಾದ ಪರಿಸ್ಥಿತಿ ಇತ್ತು. ಇದೀಗ ಸರ್ಕಾರ ಮಾಡಿಸಿಕೊಡಬೇಕಾದ ಕೆಲಸವನ್ನು ಗ್ರಾಮಸ್ಥರು ಶ್ರಮದಾನದನದ ಮೂಲಕ ಮಾಡಿದ್ದು ಪ್ರಶಂಸನೀಯವಾಗಿದೆ.
ಈ ಸಂದರ್ಭದಲ್ಲಿ ಸ್ಥಳೀಯ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟ್ರಮಣ ನಾಯ್ಕ, ತಿಮ್ಮಣ ನಾಯ್ಕ, ತಿರುಮಲ ನಾಯ್ಕ, ಮಂಜುನಾಥ ನಾಯ್ಕ, ಮಾದೇವ ನಾಯ್ಕ, ಶ್ರೀನಿವಾಸ ಇನ್ನಿತರರು ಇದ್ದರು.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ