Follow Us On

WhatsApp Group
Important
Trending

ಕಾಣೆಯಾದ ಯುವಕ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಗೋಕರ್ಣ: ಕುಟುಂಬದವರೊoದಿಗೆ ಶ್ರೀ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವರ ದರ್ಶನಕ್ಕೆ ಆಮಿಸಿದ ಯುವಕನೊಬ್ಬ ಕಾಣೆಯಾದ ಘಟನೆ ನಡೆದಿದೆ. ಬೆಂಗಳೂರು ರಾಮಮೂರ್ತಿ ನಗರದ ಎಂ. ಸಾಯಿ ರಾಘವ ನಾಪತ್ತೆಯಾದ ಯುವಕ. ಈ ಕುರಿತು ನಾಪತ್ತೆಯಾದ ಯುವಕನ ತಂದೆ ಆರ್. ಮನವಳನ್ ಇವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾದ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದಾರೆ. ಈತನಿಗೆ ಇಂಗ್ಲಿಷ್, ಹಿಂದಿ, ಕನ್ನಡ, ತೆಲುಗು ಭಾಷೆ ಬರುತ್ತಿದ್ದು, ಈತನ ಕುರಿತು ಮಾಹಿತಿ ತಿಳಿದುಬಂದಲ್ಲಿ ಗೋಕರ್ಣ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.

ವಿಸ್ಮಯ ನ್ಯೂಸ್, ಗೋಕರ್ಣ

Back to top button