Important
Trending

ಮೋದಿಗಾಗಿ ಉರುಳು ಸೇವೆ? ಇವರ ಸಂಕಲ್ಪ ಏನಿತ್ತು ನೋಡಿ?

ಅಂಕೋಲಾ: ನಾನಾ ಕಾರಣಗಳಿಂದ ಭಕ್ತರು ಮತ್ತು ಭಕ್ತಿಯ ಕೆಲ ಸನ್ನಿವೇಶಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಇನ್ನು ದೇಶದ ರಾಜಕೀಯ ವಿಚಾರ ಬಂದಾಗಲoತೂ, ನರೇಂದ್ರ ಮೋದಿ ಎಂದರೆ ದೈವ ಸಮಾನರಾಗಿ ಕಾಣುವ ಹಲವು ಭಕ್ತರಿದ್ದಾರೆ. ತಮ್ಮ ನೆಚ್ಚಿನ ನಾಯಕ ಮತ್ತೆ ಈ ದೇಶದ ಚುಕ್ಕಾಣಿ ಹಿಡಿಯಬೇಕೆಂದು ಹರಕೆ ಹೊತ್ತಿದ್ದ, ಅಂಕೋಲಾ ತಾಲೂಕಿನ ಡೂಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳವಳ್ಳಿಯ ವ್ಯಕ್ತಿಯೋರ್ವರು ನಡೆಸಿದ ಉರುಳು ಸೇವೆಯ ದೃಶ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಸ್ಥಳೀಯರಾದ ಹರಿಹರ ಭಟ್ಟ ಅವರು,ಲೋಕಸಭಾ ಚುನಾವಣೆಯಲ್ಲಿ ತನ್ನ ನೆಚ್ಚಿನ ಜನನಾಯಕರಾದ ಮೋದಿಯವರು, ಗೆದ್ದು ಬಂದು, ಸತತ ಮೂರನೇ ಬಾರಿ ಅವರೇ ಈ ದೇಶದ ಪ್ರಧಾನಿಯಾಗಲಿ ಎಂದು ಶ್ರೀ ಸಿದ್ಧಿವಿನಾಯಕ ದೇವರಲ್ಲಿ ಪ್ರಾರ್ಥಿಸಿದ್ದರು. ತನ್ನ ಹರಕೆ ಫಲಿಸಿದಲ್ಲಿ ದೇವಸ್ಥಾನದ ಸುತ್ತ ಉರುಳು ಸೇವೆ ಸಲ್ಲಿಸುವುದಾಗಿ ಹರಕೆ ಹೊತ್ತಿದ್ದರು. ಅವರು ಬಯಸಿದಂತೆ ಮತ್ತೆ ಪ್ರಧಾನಿಯಾಗಿ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ್ದು, ಇದರಿಂದ ಸಂತಸಗೊoಡಿರುವ ಅವರ ಅಪ್ಪಟ ಅಭಿಮಾನಿಯಿರುವ ಹರಿಹರ ಭಟ್ಟ ಅವರು, ಗ್ರಾಮದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ತೆರಳಿ,ದೇಗುಲದ ಹೊರ ಪ್ರಾಂಗಣದಲ್ಲಿ ತಮ್ಮ ಉರುಳು ಸೇವೆ ಸಲ್ಲಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button