ವಿಶ್ವಯೋಗ ದಿನದ ಹಿನ್ನಲೆ: ಹೊನ್ನಾವರ ತಾಲೂಕಿನ ವಿವಿಧೆಡೆ ಉಚಿತ ಯೋಗ ಶಿಬಿರ

ಹೊನ್ನಾವರ: ಯೋಗದ ಮಹತ್ವ ಈಗ ವಿಶ್ವಾದ್ಯಂತ ಹರಡಿದೆ. ಯೋಗದಿಂದ ಆರೋಗ ಕಾಪಾಡಬಹುದು. ಇಂತಹ ಯೋಗವನ್ನು ಪ್ರಚುರ ಪಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ ಜಗತ್ತಿನಾದ್ಯಂತ ಜೂನ್ 21 ನ್ನು ವಿಶ್ವಯೋಗ ದಿನಾಚರಣೆಯನ್ನು ಆಚರಿಸುತ್ತಿದೆ. ಹೊನ್ನಾವರ ತಾಲೂಕಿನಲ್ಲಿ ಜೂನ್ 14 ರಿಂದ ಜೂನ್ 21 ರವರೆಗೆ ತಾಲೂಕಿನ 11 ಕಡೆಗಳಲ್ಲಿ ಯೋಗ ಶಿಬಿರವನ್ನು ನಾನಾ ಸಂಘ, ಸಮಿತಿಯ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ.

ಹೊನ್ನಾವರ ಪಟ್ಟಣದಲ್ಲಿ ಜೂನ್ 14 ರಿಂದ ಜೂನ್ 20 ರವರೆಗೆ ವಿವಿಧ ಸ್ಥಳಗಳಲ್ಲಿ ಹಾಗೂ ಜೂನ್ 21 ರಂದು ತಾಲೂಕಿನ ಶ್ರೀ ಮೂಡಗಣಪತಿ ಸಭಾಭವನ ಪ್ರಭಾತನಗರದಲ್ಲಿ ಸಾಮೂಹಿಕ ಯೋಗ ಶಿಬಿರವನ್ನು ಆರೋಗ್ಯ ಭಾರತಿ ಸಂಸ್ಥೆಯಿoದ ಆಯೋಜಿಸಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಂಘ-ಸoಸ್ಥೆಯವರು ವಿನಂತಿಸಿಕೊoಡಿದ್ದಾರೆ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Exit mobile version