Important
Trending

ಕರುವನ್ನು ಹುಡುಕುತ್ತ ಮುಂದೆ ಹೋದಾಗ ಶಾಕ್: ಹಸುಗರುವನ್ನು ನುಂಗಿತ್ತು ಬೃಹತ್ ಹೆಬ್ಬಾವು

ಅಂಕೋಲಾ: ತಮ್ಮ ಮನೆಯ ಆಕಳು ಕರು ಹಾಕಿದೆ ಎಂದು ಸಂತಸದಿ ಹುಡುಕಲು ಹೋಗಿದ್ದ ದಂಪoತಿಗಳು, ಅಲ್ಲಿ ಕರು ಇರದೇ ಆಕಳು ಮಾತ್ರ ಇರುವುದನ್ನು ಕಂಡು ಆತಂಕಗೊoಡಿದ್ದರು. ಕರುವನ್ನು ಹುಡುಕುತ್ತ ಸ್ವಲ್ಪ ಮುಂದೆ ಮುಂದೆ ಹೋದಂತೆ, ಉಬ್ಬಿದ ಹೊಟ್ಟೆಯಲ್ಲಿದ್ದ ಹೆಬ್ಬಾವು ಕಂಡು ಹೌಹಾರಿದ್ದರು. ಸುದ್ದಿ ತಿಳಿದ ಅರಣ್ಯ ಇಲಾಖೆಯವರು ಮತ್ತು ವನ್ಯ ಜೀವಿ ಸಂರಕ್ಷಕರೂ ಸ್ಥಳಕ್ಕೆ ಬಂದರೂ, ಆ ಹೆಬ್ಬಾವನ್ನು ಹಿಡಿಯುದೇ, ಅಲ್ಲಿಯೇ ಬಿಟ್ಟು ಹೋಗಿರುವುದು ಯಾಕೆ ಎಂಬ ಉತ್ತರ ಇಲ್ಲಿದೆ ನೋಡಿ.

ಇದನ್ನೂ ಓದಿ: ಮಂಗಳಮುಖಿ ವೇಷ ಧರಿಸಿದ ಪುರುಷ: ಅಸಲಿ ಮಂಗಳಮುಖಿಯರು ಮಾಡಿದ್ದೇನು ನೋಡಿ?

ಅಂಕೋಲಾ ತಾಲೂಕಿನ ಅವರ್ಸಾ ಮಧ್ಯಮ ವರ್ಗದ ಕುಟುಂಬವೊoದು ಹಸುವನ್ನು ಸಾಕಿಕೊಂಡಿತ್ತು. ಆ ಹಸು ಗಬ್ಬಕ್ಕೆ ಬಂದು ದೇವನ ಭಾಗ ವ್ಯಾಪ್ತಿಯ ಬೇರೆ ಕುಟುಂಬದ ಖಾಸಗಿ ಜಾಗದಲ್ಲಿಯೇ ಕರುವಿಗೆ ಜನ್ಮ ನೀಡಿತ್ತು. ತಮ್ಮ ಮನೆಯ ಆಕಳು ಕರುಹಾಕಿರಬಹುದೆಂದು ಅದನ್ನು ಹುಡುಕುತ್ತಾ ಬಂದ ದಂಪತಿಗಳಿಬ್ಬರು, ಬೇರೆಯವರ ಖಾಸಗಿ ಜಾಗದಲ್ಲಿ ತಮ್ಮ ಆಕಳು ನಿಂತಿರುವುದನ್ನು ನೋಡಿದರಾದರೂ,ಅದರ ಅಕ್ಕ ಪಕ್ಕ ಎಲ್ಲಿಯೂ ಕರು ಕಂಡು ಬರದೇ ಆತಂಕಗೊoಡು,ಅದನ್ನು ಹುಡುಕುತ್ತಾ ಸ್ವಲ್ಪ ಮುಂದೆ ಮುಂದೆ ಹೆಜ್ಜೆ ಹಾಕಿದ್ದಾರೆ.

ಈ ವೇಳೆಗೆ ಅನತಿ ದೂರದಲ್ಲಿ ಭಾರೀ ಗಾತ್ರದ ಹೆಬ್ಬಾವೊಂದು ಹೊಟ್ಟೆ ಉಬ್ಬಿದ ರೀತಿಯಲ್ಲಿ,ಗಿಡ ಗಂಟಿಗಳ ಪೊದೆ ಬಳಿ ಅವಿತಿರುವುದನ್ನು ಗಮನಿಸಿ ಕ್ಷಣ ಕಾಲ ಹೌಹಾರಿದ್ದಾರೆ. ನಂತರ ಅಕ್ಕಪಕ್ಕದ ನಿವಾಸಿಗಳು ಮತ್ತು ಈ ದಂಪತಿಗಳು ಅರಣ್ಯ ಇಲಾಖೆಗೆ ಮತ್ತು ಸ್ಥಳೀಯರೇ ಆದ ಉರಗ ಮತ್ತು ವನ್ಯಜೀವಿ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯವರು ಮತ್ತು ಮಹೇಶ ನಾಯ್ಕ, ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಹೆಬ್ಬಾವು ಸೆರೆ ಕಾರ್ಯಾಚರಣೆಯಿಂದ ಹಿಂದೆ ಸರಿದಿದ್ದಾರೆ.

ಆದರೆ ಅದಕೊಪ್ಪದ ಸ್ಥಳೀಯ ಕೆಲವರು,ಸುತ್ತಮುತ್ತಲು ಜನ ವಸತಿಯಿದ್ದು,ಮನೆಮಕ್ಕಳು ಆಟ ಆಡಿಕೊಂಡಿರುವ, ಓಡಾಡುವ ಇಂತಹ ಪ್ರದೇಶದಲ್ಲಿ ಹೆಬ್ಬಾವನ್ನು ಹಾಗೆಯೇ ಬಿಟ್ಟು ಹೋದಲ್ಲಿ,ಜನ ಹಾಗೂ ಜಾನುವಾರುಗಳ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿ,ಕೂಡಲೇ ಹೆಬ್ಬಾವನ್ನು ಸ್ಥಳಾಂತರಿಸುವoತೆ ಸಂಬoಧಿಸಿದವರಿಗೆ ಒತ್ತಾಯಿಸಿದ್ದಾರೆ.

ಈ ವೇಳೆ ಅಧಿಕಾರಿಗಳು, ಹೆಬ್ಬಾವಿನ ಜೀವನ ಕ್ರಮ, ಆಹಾರ ಸೇವನೆ , ಆ ಬಳಿಕ ಪಚನ ಕ್ರಿಯೆಯನ್ನು ಸವಿಸ್ತಾರವಾಗಿ ತಿಳಿಸಿ, ಈಗಾಗಲೇ ಹೆಬ್ಬಾವು ಕರು ನುಂಗಿದ್ದು, ಕರು ಸತ್ತು ಹೋಗಿರುವುದು ನಮಗೂ ಬೇಸರವಿದೆ. ಹಾಗಂತ ನಾವು ಆಹಾರ ನುಂಗಿರುವ ಹೆಬ್ಬಾವನ್ನು ನಾವೀಗ ಸ್ಥಳಾಂತರಿಸಲು ಹೋದರೆ, ಹೆಬ್ಬಾವೂ ಕೂಡಾ ಸಾಯುವ ಸಾಧ್ಯತೆ ಹೆಚ್ಚಿದೆ ಎಂದು ವಿವರಿಸಿದರು.

ಹೊನ್ನಪ್ಪ ನಾಯಕ ಸೇರಿದಂತೆ ಕೆಲ ಪ್ರಮುಖರು, ಸ್ಥಳೀಯರಿದ್ದರು. ಒಟ್ಟಿನಲ್ಲಿ ಕರು ನುಂಗಿದ ಹೆಬ್ಬಾವನ್ನು 2-3 ದಿನಗಳ ಕಾಲ ಅಲ್ಲಿಯೇ ಇರಲು ಬಿಟ್ಟು,ನಂತರ ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಮುಂದಾದoತಿದ್ದು, ಸಂರಕ್ಷಣಾ ಕಾರ್ಯಾಚರಣೆ ಕುರಿತು ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button