Follow Us On

WhatsApp Group
Important
Trending

ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಮಹಿಳೆ: ಮನೆಯವರು ಬರುತ್ತಿದ್ದಂತೆ ಪರಾರಿ

ಸಿದ್ದಾಪುರ: ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಮಹಿಳೆಯೋರ್ವಳು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ತಾಲೂಕಿನ ಬೇಡ್ಕಣಿಯಲ್ಲಿ ನಡೆದಿದೆ. ಬೇಡ್ಕಣಿಯ ಪುಟ್ಟೇನಹಕ್ಲು ಮನೆಯೊಂದರಲ್ಲಿ ಮನೆಯವರು ಮನೆಗೆ ಬೀಗ ಹಾಕಿ ಗದ್ದೆ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಊಟಕ್ಕೆಂದು ಮನೆಗೆ ಬರುತ್ತಿದ್ದಾಗ ಮನೆಯ ಬಾಗಿಲು ತೆರೆದಿರುವುದು ಕಂಡುಬoದಿದೆ. ಮನೆಯವರು ಬರುತ್ತಿರುವುದನ್ನ ಗಮನಿಸಿದ ಮಹಿಳೆಯು ಮನೆಯ ಮುಂದಿನ ಬಾಗಿಲಿನಿಂದ ಜಿಗಿದು ಓಡಿ ಹೋಗಿದ್ದಾಳೆ.

ವಿದ್ಯುತ್ ತಂತಿ ಮೇಲೆ ಬಿದ್ದ ತೆಂಗಿನ ಹೆಡೆ: ತಂತಿ ತುಂಡಾಗಿ ಮೈ ಮೇಲೆ ಬಿದ್ದು ವಿದ್ಯುತ್ ಶಾಕ್ ತಗುಲಿ ಯುವಕ ಸಾವು

ಮನೆಯ ಒಳಗೆ ಲೈಟ್ಗಳನ್ನು ಹಾಕಿ, ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಗೋಡ್ರೇಜ್ ನಲ್ಲಿರುವ 12 ಗ್ರಾಂ ಚಿನ್ನದ ಚೈನ್, 5 ಗ್ರಾಂ ಬಂಗಾರದ ಉಂಗುರ, 10 ಗ್ರಾಂ ಎರಡು ಬೆಳ್ಳಿಯ ಬ್ರೇಸ್ ಲೈಟ್, 20 ಗ್ರಾಂ ತೂಕದ ಬೆಳ್ಳಿಯ ಚೈನ್ ಸೇರಿ ಒಟ್ಟು 1 ಲಕ್ಷದ 23 ಸಾವಿರದ ಮೌಲ್ಯದ ಆಭರಣಗಳು ಕಾಣೆಯಾಗಿರುವ ಬಗ್ಗೆ ಮಹೇಶ ನಾಯ್ಕ ಬೇಡ್ಕಣಿ ದೂರು ನೀಡಿದ್ದಾರೆ. ಮನೆಯಿಂದ ಓಡಿ ಹೋದ ಮಹಿಳೆ ಅಂದಾಜು ಸುಮಾರು 28 ವರ್ಷದವಳಾಗಿದ್ದು ತೆಳ್ಳನೆಯ ಮೈಕಟ್ಟು, ಕಪ್ಪು ಬಣ್ಣದ ಟಾಪ್, ಕೆಂಪು ಬಣ್ಣದ ಪ್ಯಾಂಟ್ ಹಾಗೂ ವೇಲ್ ಧರಿಸಿರುವುದನ್ನು ನೋಡಿರುವುದಾಗಿ ದೂರುದಾರ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button