ಹೆಚ್ಚುತ್ತಲೇ ಇದೆ ಡೆಂಗ್ಯೂ ಪೀಡಿತರ ಸಂಖ್ಯೆ: ನೂರರ ಗಡಿದಾಟಿದ ಮಹಾಮಾರಿ: ಸೂಕ್ತ ಮುನ್ನೆಚ್ಚರಿಕಾ ಕ್ರಮ ಏನು?
ಕುಮಟಾ: ಮಳೆಗಾಲ ಪ್ರಾರಂಭವಾದ ಬೆನ್ನಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ಏರುತ್ತಿದ್ದು, ಜಿಲ್ಲೆಯ ಜನರಿಗೆ ಇದೊಂದು ಆತಂಕದ ಸಂಘತಿಯಾಗಿದೆ. ಮಳೆ ಜೋರಾದಂತೆ ವೃದ್ಧಿಯಾಗುತ್ತಿರುವ ಸೊಳ್ಳೆಗಳ ಸಂತತಿಯಿAದಾಗಿ ಡೆಂಗ್ಯೂ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಇದುವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ 100 ರಷ್ಟಾಗಿದೆ. ಇದರಲ್ಲಿ ಹೊನ್ನಾವರಮತ್ತು ಭಟ್ಕಳದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಹೊನ್ನಾವರದಲ್ಲಿ 28, ಅಂಕೋಲಾದಲ್ಲಿ 27, ಭಟ್ಕಳದಲ್ಲಿ 11, ಕುಮಟಾದಲ್ಲಿ 5, ಶಿರಸಿ 7, ಕಾರವಾರ 6 ಹಾಗೂ ಸಿದ್ದಾಪುರ ಮತ್ತು ಯಲ್ಲಾಪುರದಲ್ಲಿ ತಲಾ 5 ಹಾಗೂ ಮುಂಡಗೋಡ ಹಳಿಯಾಳದಲ್ಲಿ ತಲಾ ಒಂದೊAದು ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ.
ಇನ್ನೂ ಕುಮಟಾ ತಾಲೂಕಿಗೆ ಸಂಬAದಿಸಿದAತೆ ಸದ್ಯ ಕುಮಟಾದಲ್ಲಿ 5 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಈ ಕುರಿತಾಗಿ ಕುಮಟಾ ತಾಲೂಕಾ ಆರೋಗ್ಯಾಧಿಕಾರಗಳಾದ ಆಜ್ಞಾ ನಾಯಕ ಅವರು ಮಾಹಿತಿ ನೀಡಿದ್ದಾರೆ. ಡೆಂಗ್ಯೂ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಆದರೆ ಯಾರೂ ಸಹ ಅತಿಯಾಗಿ ಬಯಪಡುವ ಅಗತ್ಯವಿಲ್ಲ. ಸೊಳ್ಳೆಯ ಸಂತತಿ ಹೆಚ್ಚಾಗುವುದನ್ನು ನಿಯಂತ್ರಿಸಿ, ಮುಂಜಾಗೃತ ಕ್ರಮ ಕೈಗೊಂಡಲ್ಲಿ ಈ ಒಂದು ಮಾರಣಂತಿಕ ಕಾಯಿಲೆಯನ್ನು ಹೊಡೆದೋಡಿಸಬಹುದಾಗಿದೆ ಎನ್ನುತ್ತಾ ಡೆಂಗ್ಯೂವಿನ ರೋಗ ಲಕ್ಷಣ ಮುಂತಾದವುಗಳ ಕುರಿತಾಗಿ ಹಾಗೂ ಕುಮಟಾ ತಾಲೂಕಿನ ಡೆಂಗ್ಯೂ ಪ್ರಕರಣಗಳ ಕುರಿತು ಸಂಕ್ಷಿಪ್ತ ವಿವರಣೆ ನೀಡಿದರು.
ಡೆಂಗ್ಯೂ ನಿಯಂತ್ರಣಕ್ಕೆ ಮುಖ್ಯವಾಗಿ ತೆಗೆದುಕೊಳ್ಳುವ ಮುಂಜಾಗೃತ ಕ್ರಮ ಎಂದರೆ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಡುವುದು. ಮನೆಯ ಹೊರ ಹಾಗೂ ಒಳಗವನ್ನು ಸ್ವಚ್ಚವಾಗಿಡಬೇಕು. ಹೂವಿನ ಕುಂಡ, ಟಯರ್, ತೆಂಗಿನ ಗರಟೆ ಮುಂತಾದವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ನಮ್ಮ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು. ಆ ಮೂಲಕ ಡೆಂಗ್ಯೂ ನಿಯಂತ್ರಣದಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕೆಂದು ಇದೇ ವೇಳೆ ಆರೋಗ್ಯಾಧಿಕಾರಿಗಳು ತಿಳಿಸಿದರು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ