Follow Us On

WhatsApp Group
Important
Trending

ಗೋರೆಯ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಕಳ್ಳತನಕ್ಕೆ ವಿಫಲ ಯತ್ನ: ಸಿಸಿ ಕ್ಯಾಮರಾ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಕುಮಟಾ: ತಾಲೂಕಿನ ಗೋರೆಯ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ತಡರಾತ್ರಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದ್ದು ಬೆಳಕಿಗೆ ಬಂದಿದೆ. ದೇವಾಲಯದ ಹೆಂಚು ತೆಗೆದು ಒಳ ನುಸುಳಿದ ಕಳ್ಳರ ಗ್ಯಾಂಗ್‌ವೊoದು ದೇವಾಲಯದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಧ್ವಂಸಗೊಳಿಸಿ ಕಳುವಿಗೆ ಯತ್ನಿಸಿದೆ. ದೇವಾಲಯದ ಅರ್ಚಕರು ಬೆಳಿಗ್ಗೆ ಪೂಜೆಗೆ ಬಂದ ಸಮಯದಲ್ಲಿ ಕಳ್ಳರು ಅಟ್ಟಹಾಸ ಮೆರೆದಿರುವುದು ಬೆಳಕಿಗೆ ಬಂದಿದೆ. ದೇವಾಲಯದ ಮೇಲ್ಭಾಗದಲ್ಲಿ ಹೆಂಚು ತೆಗದ ಕಳ್ಳರು ಮೊದಲು ಸಿಸಿ ಕ್ಯಾಮರಾವನ್ನು ಧ್ವಂಸಗೊಳಿಸಿದ್ದಾರೆ.

ಇದನ್ನೂ ಓದಿ: ಬೃಹತ್ ನೇಮಕಾತಿ: 8 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ: SSLC ಆದವರು ಅರ್ಜಿ ಸಲ್ಲಿಸಿ

ಇದಾದ ಬಳಿಕ ದೇವಾಲಯದ ಗರ್ಭ ಗುಡಿಯ ಬಾಗಿಲ ಬೀಗ ಕತ್ತರಿಸಿ ಗರ್ಬಗುಡಿಯಲ್ಲಿ ಇರಿಸಲಾಗಿದ್ದ ಉತ್ಸವ ಮೂರ್ತಿ, ಆಭರಣ ಇತ್ಯಾದಿಗಳನ್ನು ತೆಗೆಯಲಾಗದೆ ಪರಾರಿಯಾಗಿದ್ದಾರೆ. ದೇವಾಲಯದ ಒಳಬಾಗದಲ್ಲಿ ಹಾಕಲಾದ ಗಂಟೆಯನ್ನು ಮುರಿಯಲು ಯತ್ನಿಸಿ ವಿಫಲರಾಗಿದ್ದು, ಯಾವುದೇ ಕಳ್ಳತನ ಆಗಿರುವ ಬಗ್ಗೆ ವರದಿಯಾಗಿಲ್ಲ. ಸ್ಥಳಕ್ಕೆ ಕುಮಟಾ ಪಿಎಸ್‌ಐ ಮಂಜುನಾಥ ಗೌಡರ್ ಹಾಗೂ ಸಿಬ್ಬಂದಿ ಭೇಟಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ನಾಗೇಶ್ ದಿವಗಿ, ಕುಮಟಾ

Back to top button