ಸದ್ಯ ದೇಶವ್ಯಾಪಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಘೋಷಣೆಯಾಗಿದ್ದು, ಬಹುತೇಕ ಎಲ್ಲಾ ಕಂಪೆನಿಗಳು, ವ್ಯವಹಾರ ಕೇಂದ್ರಗಳು,ಕಾರ್ಮಿಕರನ್ನು ಅವಲಂಬಿಸಿರುವ ಪ್ಯಾಕ್ಟರಿಗಳು ಬಂದ್ ಆಗಿದೆ. ಇದರಿಂದಾಗಿ ವೈದ್ಯರು ಮತ್ತು ಕೊರೊನಾ ಕರ್ತವ್ಯ ನಿರತ ಆಸ್ಪತ್ರೆಗಳಿಗೆ ಅವಶ್ಯಕವಾಗಿರುವ Àಪರ್ಸನಲ್ ಪ್ರೊಟೆಕ್ಟಡ್ ಕಿಟ್ ಗಳಿಗೆ ಸಮಸ್ಯೆ ತಲೆದೋರಿದೆ. ಕೊರೊನಾದಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಲು ಸಾಧ್ಯವಾಗುತ್ತಿಲ್ಲ. ಆದರೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆಯ ಧ್ರುತಿ ಸರ್ಜಿಕಲ್ ಸೋಲುಶನ್ ಪ್ರೈ ಲಿಮಿಟೆಡ್ ನ ಸರ್ಜಿಕಲ ಪ್ಯಾಕ್ಟ್‍ರಿಯಲ್ಲಿ ವೈದ್ಯರಿಗೆ ಹಾಗೂ ಕೊರೊನಾ ಕರ್ತವ್ಯನಿರತ ಆಸ್ಪತ್ರೆಗಳಿಗೆ ಅವಶ್ಯಕವಾಗಿರುವ ಕಿಟ್ ತಯಾರಿಕೆಯಲ್ಲಿ ಹಗಲಿರುಳು ದುಡಿಯುತ್ತಿದ್ದಾರೆ. ಇಲ್ಲಿನ ಸಿಬ್ಬಂದಿಗಳು ಕೂಡ ದೇಶ ಸೇವೆ ಹಾಗೂ ಆಪತ್ಕಾಲದಲ್ಲಿ ನೆರವಾಗುವ ಉದ್ದೇಶದಿಂದ ಹಗಲಿರುಳು ಕಿಟ್ ತಯಾರಿಕೆಯಲ್ಲಿ ಪರಿಶ್ರಮಪಡುತ್ತಿದ್ದಾರೆ. ಧೃತಿ ಸರ್ಜಿಕಲ್ ಈಗಾಗಲೇ 25 ಸಾವಿರ ಪಿಪಿಇ ಕಿಟ್ ತಯಾರಿಸಲಾಗಿದೆ.
ಹೆಚ್ಚುತ್ತಿರುವ ಕೊರೊನಾ ಹಿನ್ನಲೆಯಲ್ಲಿ ಕಿಟ್ ತಯಾರಿಕೆಗೆ ಎಲ್ಲೆಡೆಯಿಂದ ಡಿಮಾಂಡ ಹೆಚ್ಚಾಗಿದ್ದು, ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲವಾಗಿದೆ. ಈ ನಡುವೆ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಎಲ್ಲ ಸಹಕಾರ ನೀಡುತ್ತಿದ್ದಾರೆ. ಎರಡು ತಿಂಗಳಿಂದ ಇದನ್ನು ತಯಾರಿಸುತ್ತಿದ್ದು ಪ್ರಸ್ತುತ ಮಂಗಳೂರು, ಉಡುಪಿ, ಕಾರವಾರ ಜಿಲ್ಲೆಯಿಂದ ವ್ಯಾಪಕ ಬೇಡಿಕೆಯಿದೆ. ಬೇಡಿಕೆಗೆ ತಕ್ಕಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದನ್ನು ಕೊರೊನಾ ಪ್ರೊಟೆಕ್ಷನ್ ಕಿಟ್ ಆಗಿ ಬಳಸಲಾಗುತ್ತಿದೆ. ಪ್ಯಾಕ್ಟ್‍ರಿಗೆ ವೃತ್ತ ನಿರೀಕ್ಷಕರು, ಕಂದಾಯ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಕಾರ್ಮಿಕರಿಗೆ ಧೈರ್ಯ ತುಂಬಿದ್ದಾರೆ. ಕಂಪೆನಿ ಸಿಬ್ಬಂದಿಗಳು ಕೂಡ ಕೊರೊನಾ ಅಗತ್ಯ ಪರಿಕರ ಪೂರೈಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಹು ಬೇಡಿಕೆಯ ಪ್ರೊಟೆಕ್ಸನ್ ಕಿಟ್ ಈ ಭಾಗದಲ್ಲಿ ಸಿದ್ದವಾಗುತ್ತಿರುವುದು ಇನ್ನಷ್ಟು ಹೆಮ್ಮೆಯ ವಿಚಾರವಾಗಿದೆ. ಮಾರಕ ರೋಗ ಕರೋನಾ ವಕ್ಕರಿಸಿದ ದಿನದಿಂದ ದೃತಿ ಸರ್ಜಿಕಲ್ ಫ್ಯಾಕ್ಟರಿಗೆ ಬಿಡುವೆ ಇಲ್ಲ ಎನ್ನುವಂತಾಗಿದೆ. ಈ ಕಿಟ್ ನಲ್ಲಿ ವೈದ್ಯರಿಗೆ ಗ್ಲೌಸ್, ತಲೆಧರಿಸಿಸುವ ಕ್ಯಾಪ್, ಮಾಸ್ಕ್, ಗೌನ್, ಶೂ ಲೆಗ್ಗಿಂಗ್, ಏಪ್ರಾನ್ ಗಳು ಬರುತ್ತವೆ. ಇದನ್ನು ವಿವಿಧ ಸ್ಥರಗಳಲ್ಲಿಇಲ್ಲಿ ಉತ್ಪಾದಿಸಲಾಗುತ್ತಿದೆ. ಜಿಲ್ಲೆಯಲ್ಲಿಯೇ ಒಂದೇ ಒಂದು ಸರ್ಜಿಕಲ್ ಫ್ಯಾಕ್ಟರಿ ಇದಾಗಿದ್ದು, ಪಿಪಿಇ ಕಿಟ್ ತಯಾರಿಕೆಗೆ ಬೇಕಾದ ಎಲ್ಲಾ ಕಚ್ಛಾ ವಸ್ತುಗಳನ್ನು ಹೊರರಾಜ್ಯವಾದ ಗುಜರಾತ್, ಹಿಮಾಚಲಪ್ರದೇಶ, ಮಧ್ಯಪ್ರದೇಶ, ಆಂದ್ರಪ್ರದೇಶ, ದೆಹಲಿ, ಕೇರಳ, ಪುಣೆ ಹಾಗೂ ರಾಜ್ಯದ ಆಮದು ಮಾಡಿಕೊಳ್ಳಲಾಗಿದೆ. ಕಳೆದ ಮೂರು ವರ್ಷ ಹಿಂದೆ 3 ವರ್ಷದ ಹಿಂದೆ ತಯಾರಾದ ಸರ್ಜಿಕಲ್ ಫ್ಯಾಕ್ಟರಿ ಇದಾಗಿದ್ದು, ಕೆಲಸಗಾರರನ್ನು ತೀರಾ ಸ್ನೇಹ ಬಾಂಧವ್ಯದಿಂದ ನೋಡಿಕೊಳ್ಳುತ್ತಿದ್ದು, ಕೆಲಸಗಾರರಿಗೆ ಎಲ್ಲಾ ರೀತಿಯ ಮೂಲಭುತ ವ್ಯವಸ್ಥೆಯ ಜೊತೆಗೆ ಉತ್ತಮ ಸಂಬಳ, ಆರೋಗ್ಯ ವಿಮಾ, ಸೇವಾ ಭದ್ರತೆ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಈ ಕಿಟ್ ಕಿಟ್ ಹಾಗೂ ಮಾಸ್ಕಗೆ ಎಲ್ಲಾ ಸಹಕಾರ ನೀಡುವ ಕುರಿತು ಪ್ರಧಾನಮಂತ್ರಿ ಕಚೇರಿಯಿಂದ ದೂರವಾಣಿ ಕರೆ ಬಂದಿದ್ದು, ಇದು ಸಹ ಇನ್ನಷ್ಟು ಪ್ರೋತ್ಸಾಹಕ್ಕೆ ಕಾರಣವಾಗಿದೆ ಎನ್ನುತ್ತಾರೆ ಧ್ರುತಿ ಸರ್ಜಿಕಲ್ ಸೋಲುಶನ್ ಪ್ರೈ ಲಿಮಿಟೆಡ್ ಸರ್ಜಿಕಲ ಪ್ಯಾಕ್ಟ್‍ರಿಯ ಮ್ಯಾನೆಜಿಂಗ್ ಡೈರಕ್ಟ್‍ರ್ ಶರತ್ ಕುಮಾರ್ ಶೆಟ್ಟಿ. ಒಟ್ಟಾರೆಯಾಗಿ ಕೊರೋನಾ ಎರ್ಮಜೆನ್ಸಿ ಸಂದರ್ಭದಲ್ಲಿ ಅತೀ ಅಗತ್ಯವಾಗಿ ಬೇಕಿರುವ ವೈದ್ಯಕೀಯ ಕಿಟ್ ಹಗಲು ರಾತ್ರಿ ತಯಾರಾಗಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ಸೇರುತ್ತಿದೆ. ಇದರಿಂದ ಕರೋನಾ ರೋಗಿಗಳ ಶುಶ್ರೂಷೆಯಲ್ಲಿ ತೊಡಗುವ ವೈದ್ಯರು ಮತ್ತು ನರ್ಸ್‍ಗಳು ಆರೋಗ್ಯ ಸುರಕ್ಷೆಯಾಗುತ್ತಿದೆ ಎಂದರೆ ತಪ್ಪಾಗಲಾರದು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
Idagunji Mahaganapati
ಇಷ್ಟಾರ್ಥ ಸಿದ್ಧಿಸುವ ಇಡಗುಂಜಿ ಮಹಾಗಣಪತಿ ದರ್ಶನ
By Vishnu Hegde