ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ: ದೇವಸ್ಥಾನದ ಶಿಖರ ಕಲಶ ಪ್ರತಿಷ್ಠಾಪನೆ
ಭಟ್ಕಳ: ತಾಲೂಕಿನ ಅಳ್ವೆಕೋಡಿಯಲ್ಲಿ ನೆಲೆಯಾಗಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಜೂನ್ 30 ರಂದು ಪರ್ತಗಾಳಿ ಮಠದ ಸ್ವಾಮಿಜಿಗಳಾದ ಶ್ರೀ ಶ್ರೀಮದ್ ವಿದ್ಯಾಧೀಶ ತಿರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಅಮೃತಹಸ್ತದಿಂದ ದೇವಸ್ಥಾನದ ಶಿಖರ ಕಲಸ ಪ್ರತಿಷ್ಠಾಪನೆ ಹಾಗೂ ನೂತನ ಯಜ್ಞಮಂಟಪ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.
ಶ್ರೀ ಕ್ಷೇತ್ರದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಜೂನ್ 29 ರಿಂದ ಜುಲೈ 27 ರ ವರೆಗೂ ಪೂಜೆ, ಹೋಮ ಹವನಗಳು ಸೇರಿದಂತೆ ಪ್ರತಿ ದಿನವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುತ್ತಿದೆ. ದಿನಂಪ್ರತಿ ಅನ್ನಸಂತರ್ಪಣೆ, ಪ್ರಸಾದ ವಿತರಣೆಯೂ ನಡೆಯುತ್ತಿದ್ದು ಶ್ರೀ ಕ್ಷೇತ್ರಕ್ಕೆ ಪ್ರತಿ ದಿನ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಹರಿದುಬರುತ್ತಿದ್ದು ಕ್ಷೇತ್ರದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ.
ಅಂದಹಾಗೇ ಸಮುದ್ರ ಹಾಗೂ ನದಿಯ ಸಂಗಮದಲ್ಲಿ ತಾಯಿ ದುರ್ಗಾಪರಮೇಶ್ವರಿ ನೆಲೆಯಾಗಿದ್ದು ಅದೆಷ್ಟೋ ಭಕ್ತರು ಈ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿ ತಮ್ಮ ಕಷ್ಟ ಕಾರ್ಪಣ್ಯಕ್ಕೆ ಪರಿಹಾರವನ್ನು ಕಂಡುಕೊAಡು ಹೋಗುತ್ತಾರೆ. ಮುರುಡೇಶ್ವರದಿಂದ ಕೆಲವೆ ಕೆಲವು ಕಿ.ಮೀ ಅಂತರದಲ್ಲಿರುವ ಶ್ರೀ ಕ್ಷೇತ್ರವು ಭಟ್ಕಳದಲ್ಲಿರುವ ಶಕ್ತಿಪೀಠಗಳಲ್ಲಿ ಒಂದಾಗಿದೆ.
ವಿಸ್ಮಯ ನ್ಯೂಸ್ ಈಶ್ವರ ನಾಯ್ಕ ಭಟ್ಕಳ