Important
Trending

27 ವರ್ಷಗಳ ಸಾರ್ಥಕ ಸೇವೆಯಲ್ಲಿ ಅಂಕೋಲಾ ರೋಟರಿ ಕ್ಲಬ್

ನೂತನ ಸಾಲಿನ ಅಧ್ಯಕ್ಷರಾಗಿ ಸತ್ಯಾನಂದ ನಾಯಕ, ಕಾರ್ಯದರ್ಶಿಯಾಗಿ ಪ್ರವೀಣಚಂದ್ರ ಹೆಗಡೆ.
ಉಪಾಧ್ಯಕ್ಷರಾಗಿ ರಾಜಾ ಪೆಡ್ನೇಕರ, ಖಜಾಂಜಿಯಾಗಿ ಅನಿಲ ನಾಯ್ಕ ಆಯ್ಕೆ.

ಅಂಕೋಲಾ : ತಾಲೂಕಿನಲ್ಲಿ 1992ರಲ್ಲಿ ಆರಂಭವಾದ ರೋಟರಿ ಕ್ಲಬ್ ತನ್ನ 27 ವರ್ಷಗಳ ಸಾರ್ಥಕ ಸೇವೆ ನೀಡಿ ಗಮನ ಸೆಳೆದಿದೆ. ಈ ಕ್ಲಬ್‍ನಲ್ಲಿ ಹೆಸರಾಂತ ವೈದ್ಯರು, ವಕೀಲರು, ವ್ಯಾಪಾರಸ್ಥರು, ಜನಪ್ರತಿನಿಧಿಗಳು, ಉದ್ದಿಮೆದಾರರು, ವಿವಿಧ ಸ್ತರದ ಗಣ್ಯರು ಸೇರಿದಂತೆ ಸಾಮಾಜಿಕ ಕಾರ್ಯಕರ್ತರನೇಕರು ವಿವಿಧ ಹಂತಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ನೂತನ ಸಾಲಿನ ಅಧ್ಯಕ್ಷರಾಗಿ ಸತ್ಯಾನಂದ ನಾಯಕ ಬೇಲೇಕೇರಿ, ಕಾರ್ಯದರ್ಶಿಯಾಗಿ ಪ್ರವೀಣಚಂದ್ರ ಹೆಗಡೆ, ಉಪಾಧ್ಯಕ್ಷರಾಗಿ ರಾಜಾ ಪೆಡ್ನೇಕರ, ಖಜಾಂಜಿಯಾಗಿ ಅನಿಲ ನಾಯ್ಕ ಆಯ್ಕೆಯಾಗಿದ್ದು, ಇತರೆ ಪದಾಧಿಕಾರಿಗಳನ್ನೊಳಗೊಂಡ ನೂತನ ಕಮೀಟಿಯು ಅಸ್ತಿತ್ವಕ್ಕೆ ಬಂದಿದ್ದು ಶೀಘ್ರದಲ್ಲಿಯೇ ಪದಗ್ರಹಣ ಸಮಾರಂಭ ನಡೆಯಲಿದೆ. ಕಳೆದ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ಪಟ್ಟಣದ ಹೆಸರಾಂತ ವರ್ತಕ ಅಕ್ಬರ ಅಲಿ ಮತ್ತು ಇತರೆ ಪದಾಧಿಕಾರಿಗಳು ಹತ್ತಾರು ವಿಧಾಯಕ ಕಾರ್ಯಕ್ರಮಗಳ ಮೂಲಕ ಕ್ಲಬ್‍ನ ಕೀರ್ತೀ ಹೆಚ್ಚಿಸಿದ್ದಾರೆ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]

Related Articles

Back to top button