Uttara Kannada
Trending

ಜಿಲ್ಲೆಯಲ್ಲಿ 17 ಕೇಸ್? ಹಾಟ್‍ಸ್ಪಾಟ್ ಆಗುತ್ತಿದೆ ಭಟ್ಕಳ

ಭಟ್ಕಳ - 11
ಕುಮಟಾ- 1
ಹಳಿಯಾಳ - 2
ಮುಂಡಗೋಡ - 1
ಅಂಕೋಲಾ - 1

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತಿದಿನ ಕರೊನಾ ಪ್ರಕರಣ ಹೆಚ್ಚುತ್ತಿದೆ. ಬುಧವಾರ ಕೂಡಾ ಜಿಲ್ಲೆಯಾದ್ಯಂತ ಒಟ್ಟು 17 ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ. ಇದೇ ವೇಳೆ ಭಟ್ಕಳದಲ್ಲಿ ಕಳೆದ ಎರಡು ಮೂರುದಿನಗಳಿಂದ ಅತಿಹೆಚ್ಚು ಪ್ರಕರಣ ದಾಖಲಾಗುತ್ತಿದ್ದು, ಇಂದೂ 11 ಸೋಂಕಿತರು ಪತ್ತೆಯಾಗಿದ್ದಾರೆ. ಉಳಿದಂತೆ ಕುಮಟಾ 1 ಮತ್ತು ಹಳಿಯಾಳದಲ್ಲಿ 2, ಮುಂಡಗೋಡ ಮತ್ತು ಅಂಕೋಲಾದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 293ಕ್ಕೆ ಏರಿಕೆಯಾದಂತಾಗಿದೆ. ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ನಲ್ಲಿ ಅಧಿಕೃತ ಅಂಕಿ-ಸಂಖ್ಯೆ ಪ್ರಕಟಗೊಳ್ಳಲಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ ಪ್ರಸಾರವಾಗುವ ವಿಸ್ಮಯ ನ್ಯೂಸ್‍ನಲ್ಲಿ ವೀಕ್ಷಿಸಬಹುದು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

[sliders_pack id=”1487″]

Back to top button