Follow Us On

Google News
Focus News
Trending

ಹೊನ್ನಾವರದಲ್ಲಿ ಡಿಕೆಶಿ ಪ್ರತಿಜ್ಞಾವಿಧಿ ಸ್ವೀಕಾರ ವೀಕ್ಷಣೆ: ಸರ್ಕಾರದ ಮಾರ್ಗಸೂಚಿ ಪಾಲನೆ

ಹೊನ್ನಾವರ: ಹೊನ್ನಾವರದಲ್ಲಿ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ ವಿಡಿಯೋ ಕಾನ್ಪರೆನ್ಸ್ ಮೂಲಕ ಡಿ.ಕೆ.ಶಿವಕುಮಾರ ಪ್ರತಿಜ್ಞಾ ದಿನ ಕಾರ್ಯಕ್ರಮದ ವೀಕ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಜ್ಞೆ ಸ್ವೀಕರಿಸಿದರು. ಹೊನ್ನಾವರ ತಾಲೂಕಿನ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಪಟ್ಟಣದ ಮತ್ತು 9 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಗುರುವಾರದಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಒಗ್ಗಟ್ಟಿನ ಮಂತ್ರ ಘೋಷಿಸಿದರು.
ಪಟ್ಟಣದ ರೋಟರಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು. ನಂತರ ವಂದೇ ಮಾತರಂ ಗೀತೆ ಮೊಳಗಿಸಲಾಯಿತು. ಪ್ರತಿಜ್ಞಾ ಕಾರ್ಯಕ್ರಮದ ನಂತರ ಕರ್ಕಿಯ ನಿವೃತ್ತ ಯೋಧ ವಿಘ್ನೇಶ್ವರ ನಾಯ್ಕ ಹಾಗೂ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಹಳದೀಪುರದ ದಾಮೋದರ ನಾಯ್ಕ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿದ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಉಸ್ತುವಾರಿ ಡಾ. ರಾಜನಂದಿನಿ ಕಾಗೋಡ ಮಾತನಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುತ್ತಾರೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಬೆಳೆಸುವುದು ಕಾಂಗ್ರೆಸ್ ಪಕ್ಷದ ಇತಿಹಾಸ. ಡಿ.ಕೆ. ಶಿವಕುಮಾರ ಈ ಇತಿಹಾಸವನ್ನು ಮರಕಳಿಸುತ್ತಾರೆ ಎಂದರು.

ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷವನ್ನು ಸಂಘಟಿಸಬೇಕು. ಕಾರ್ಯಕರ್ತರಿಂದಲೇ ನಾಯಕತ್ವ ಬೆಳೆಯುವುದು. ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಂಘಟನೆಯಲ್ಲಿ ಪಕ್ಷ ತಳಮಟ್ಟದಲ್ಲಿ ಬಲವರ್ಧನೆಗೊಂಡು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದು ಖಚಿತ.
ಜಗದೀಪ ತೆಂಗೇರಿ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕವಲಕ್ಕಿಯ ರವಿ ಶೆಟ್ಟಿ, ನಿವೃತ್ತ ಯೋಧ ವಿಘ್ನೇಶ್ವರ ನಾಯ್ಕ ಅವರ ಸನ್ಮಾನ ಪತ್ರ ವಾಚಿಸಿ ಯೋಧರು ತಮ್ಮ ಜೀವವನ್ನು ಪಣಕ್ಕಿಟ್ಟು ದೇಶದ ಗಡಿ ಕಾಯುತ್ತಾರೆ. ಅವರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಪಕ್ಷದ ಮುಖಂಡ ಸುರೇಶ ಮೇಸ್ತ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕವಲಕ್ಕಿಯ ರವಿ ಶೆಟ್ಟಿ, ಹೊನ್ನಾವರ-ಕುಮಟಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ ಹೆಗಡೆ, ಹೊನ್ನಾವರ ಕಾಂಗ್ರೆಸ್ ಶಕ್ತಿ ವಿಬಾಗದ ಸಂಚಾಲಕ ಬಾಲಚಂದ್ರ ನಾಯ್ಕ, ಇಂಟೆಕ್ ಅಧ್ಯಕ್ಷ ಆಗ್ನೆಲ್ ಡಾಯಸ್, ಸೇವಾದಳದ ಅಧ್ಯಕ್ಷ ಸಂತೋಷ ಮೇಸ್ತ, ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷ ಜಕ್ರಿಯಾ ಶೇಖ್, ಕೂಲಿಕಾರ್ಮಿಕರ ವಿಭಾಗದ ಅಧ್ಯಕ್ಷ ಶ್ರೀಕಾಂತ ಮೇಸ್ತ, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಪ.ಪಂ. ಮಾಜಿ ಅಧ್ಯಕ್ಷೆ ಜೊಸ್ಫಿನ್ ಡಾಯಸ್ ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಲು 50 ಜನರ ಮಿತಿ ಹಾಕಲಾಗಿತ್ತು. ಕೋವಿಡ್-19 ಹಿನ್ನಲೆಯಲ್ಲಿ ಇಲಾಖಾ ಸೂಚನೆ ಹಾಗೂ ಸರಕಾರದ ನಿಯಮಾವಳಿ ಪ್ರಕಾರ 50 ಜನರ ಮಿತಿಯೊಳಗೆ ಕಾರ್ಯಕ್ರಮಕ್ಕೆ ಸಂಘಟಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

[sliders_pack id=”1487″]

Back to top button