Uttara Kannada
Trending

ನಿನಾದ’ ರಾಜ್ಯಮಟ್ಟದ ಅಂತರ್ಜಾಲ ಭಾವಗೀತೆ ಗಾಯನ ಸ್ಪರ್ಧೆ 2020-ಫಲಿತಾಂಶ ಘೋಷಣೆ

ಪ್ರಥಮ ಬಹುಮಾನ 2000 ಜೊತೆಗೆ ‘ನಿನಾದ ಕೋಗಿಲೆ’ ಪ್ರಶಸ್ತಿ ಜನಾರ್ಧನ ಕುಂಭಾಸಿ ಕುಂದಾಪುರ, ದ್ವಿತೀಯ ಬಹುಮಾ‌ನ 1000 ಜೊತೆಗೆ ಬಹುಮಾನ ಫಲಕ , ಮಮ್ತಾಜ್ ಅಣ್ಣಿಗೇರಿ ಹಾವೇರಿ ,
ತೃತೀಯ ಬಹುಮಾನ 500 ಜೊತೆಗೆ ಬಹುಮಾನ ಫಲಕ ಲಿಷಾ ಕೊಕ್ಕರ್ಣೆ ಬ್ರಹ್ಮಾವರ

ಸಮಾಧಾನಕರ ಬಹುಮಾನ ಪಡೆದ ಸ್ಪರ್ಧಿಗಳು :
1.ದೀಪ್ತಿ ಭಟ್ ಯಲ್ಲಾಪುರ
2.ವಿಘ್ನೇಶ ಕೆ.ಎಸ್.ಕುಂದಾಪುರ
3. ಶಾಂತಿಕಾ ಶ್ರೀಧರ ಹೆಗಡೆ ಕುಮಟ
4.ಧಾರಿಣಿ ಎಸ್ ಕುಂದಾಪುರ
5. ಅನನ್ಯ ನಾರಾಯಣ ಮಂಗಳೂರು
6. ಶ್ರೇಷ್ಠ ಆಳ್ವ ಪುತ್ತೂರು
7.ಶಂಕರನಾರಾಯಣ ಕೆ.ಕುಂದಾಪುರ
8.ಪಲ್ಲವಿ ಕೊಡಿಯಾ ಶಿರಸಿ
9.ರವಿಕುಮಾರ್ ಕೆ.ವಿ.ಉಡುಪಿ
10. ಪ್ರಸೀದ ರಾವ್ ಧರ್ಮಸ್ಥಳ
11. ಸ್ಮಿತಾ ಅಣ್ಣಿಗೇರಿ
12.ಮೀನಾಕ್ಷಿ ಪಾಟಿಲ್ ಕಾರವಾರ

ವೀಕ್ಷಕರ ಮೆಚ್ಚುಗೆ ಬಹುಮಾನ ಪಡೆದ ಸ್ಪರ್ಧಿಗಳು
1.ಸುಪ್ರಿತಾ ಮಣಿಪಾಲ್
2.ಪ್ರೀತಿ ಕಾಮತ್ ಕುಮಟ
3.ಆಜ್ಮಾ ಎಂ. ನಾಯ್ಕ ಹೊನ್ನಾವರ
4.ನಿಹಾರಿಕಾ ಎ.ಬೆಳಗಾವಿ
5.ಚಿನ್ಮಯಿ ವಿ ಭಟ್ ಮಂಗಳೂರು
6.ಪುಷ್ಪಲತಾ ಕಾರಂತ ಮಂಗಳೂರು
7.ಸಹನಾ ಹೆಗಡೆ ಬಳ್ಕೂರು ಹೊನ್ನಾವರ
8.ಮೇಘ ಎನ್.ತೀರ್ಥಹಳ್ಳಿ
9.ಸಾಯಲ್ ಅಂತೋನ್ ಗೋಮ್ಸ್ ಭಟ್ಕಳ
10.ಅಕ್ಷತಾ ವಿನಯ್ ಸಾಲ್ಯಾನ್ ಗಂಗೊಳ್ಳಿ

ಮೊದಲ ಮೂರು ಬಹುಮಾನ ವಿಜೇತರಿಗೆ ಫಲಕ ಮತ್ತು ಅಭಿನಂದನ ಪತ್ರ  ಜೊತೆಗೆ ಬಹುಮಾನ ಮೊತ್ತವನ್ನು ಹಾಗೂ ಸಮಾಧಾನಕರ ಬಹುಮಾನ ಪಡೆದ ಸ್ಪರ್ಧಿಗಳಿಗೆ ಮತ್ತು ವೀಕ್ಷಕರ ಮೆಚ್ಚುಗೆ ಪಡೆದ  ಸ್ಪರ್ಧಿಗಳಿಗೆ ಅಂಚೆ ಮೂಲಕ  ಅಭಿನಂದನ ಪತ್ರ ಹಾಗೂ ಪುಸ್ತಕ ಬಹುಮಾನ ರವಾನಿಸಲಾಗುವುದು ಎಂದು *’ನಿನಾದ’* ಸಾಹಿತ್ಯ, ಸಂಗೀತ ಸಂಚಯ ಸಂಘಟನೆಯ ಸಂಚಾಲಕ ಉಮೇಶ ಮುಂಡಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿನಾದ ರಾಜ್ಯಮಟ್ಟದ ಅಂತರ್ಜಾಲ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಲ್ಲದೇ ಮಹಾರಾಷ್ಟ್ರ ಕೇರಳ ರಾಜ್ಯದಿಂದಲೂ ಕನ್ನಡಿಗರು ಭಾಗವಹಿಸಿದ್ದು ಮೊದಲ ಹಂತದಲ್ಲಿ ಸೂಮಾರು 210 ಜನರು ಭಾಗವಹಿಸಿದ್ದರು. ಮುಕ್ತ ಅವಕಾಶ ನೀಡಿದ ಕಾರಣ 6 ವರ್ಷದ ಮಗುವಿನಿಂದ ಹಿಡಿದು 78 ವರ್ಷದ ಹಿರಿಯರು ಭಾಗವಹಿದಿರುವುದು ವಿಶೇಷವಾಗಿತ್ತು. ಈ ಎಲ್ಲ ಗಾಯಕರಲ್ಲಿ ಎರಡನೇ ಸುತ್ತಿಗೆ 66 ಜನರನ್ನು ಆಯ್ಕೆ ಮಾಡಿ ಕಳಿಸಲಾಗಿತ್ತು. ಹಾಗೂ ಎರಡನೇ ಸುತ್ತಿನಲ್ಲಿ ಸಂಗೀತ ದೊಂದಿಗೆ ಹಾಡಿದ ಎಲ್ಲ ಗಾಯಕರ ವಿಡಿಯೋಗಳನ್ನು ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗಿತ್ತು. ಕೊನೆಗೆ ಗಳಿಗೆಯಲ್ಲಿ ನಿರ್ಣಾಯಕರ ನಿರ್ಣಯದ ಜೊತೆಗೆ ವೀಕ್ಷಕರು ಆಯ್ಕೆಮಾಡಿದ ಹತ್ತು ಜನರನ್ನು ಪ್ರೋತ್ಸಾಹಿಸಲಾಗಿದೆ ಎಂದು ಫಲಿತಾಂಶದ ಜೊತೆಗೆ ಪ್ರಕಟಣೆಯಲ್ಲಿ ನಿನಾದ ಸಂಚಾಲಕ ಉಮೇಶ ಮುಂಡಳ್ಳಿ ಹಾಗೂ ಪ್ರಧಾನ ಸಂಚಾಲಕಿ ರೇಷ್ಮಾ ಉಮೇಶ ತಿಳಿಸಿರುತ್ತಾರೆ.

[sliders_pack id=”1487″]

Back to top button