
ಭಟ್ಕಳ : ತಾಲೂಕಿನಲ್ಲಿ ಕರೋನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇಂದು ಕೂಡ 11 ಪ್ರಕರಣ ಪತ್ತೆಯಾಗಿದ್ದು. ಸೋಂಕಿತನ ಸಂಖ್ಯೆ12047ರ ಪ್ರಾಥಮಿಕ ಸಂಪರ್ಕದಲ್ಲಿ ತಾಲೂಕಿನ ಸಾಗರ ರಸ್ತೆಯ ಖಾಸಗಿ ಆಸ್ಪತ್ರೆಯ ನರ್ಸ್ ಗೆ ಸೋಂಕು ತಗಲಿದ್ದು ತಾಲೂಕಿನ ಜನರ ಎದೆ ಬಡಿತ ಹೆಚ್ಚಾಗಿದೆ.
ತಾಲೂಕಿನಲ್ಲಿ ಇಂದು 11 ಪ್ರಕರಣ ಪತ್ತೆಯಾಗಿದ್ದು ಅದರಲ್ಲಿ 9 ಪ್ರಕರಣ ದುಬೈನಿಂದ ಬಂದವರಾಗಿದ್ದು . ಒಂದು ಚೆನೈ ನಿಂದ ಬಂದಿದ್ದು ಇನ್ನುಳಿದ 1 ಪ್ರಕರಣ ಸೋಂಕಿತನ ಸಂಖ್ಯೆ 12047 ಪ್ರಾಥಮಿಕ ಸಂಪರ್ಕದಿಂದ ಸೋಂಕು ಪತ್ತೆಯಾಗಿದ್ದವರಾಗಿದ್ದಾರೆ.
ತಾಲೂಕಿನ ಮುರುಡೇಶ್ವರ ನಿವಾಸಿಯಾದ 70 ವರ್ಷದ ವೃದ್ಧ ಮತ್ತು 51ಮಹಿಳೆ, ನಾಗಪ್ಪ ನಾಯ್ಕ ರೋಡನ 7 ಮತ್ತು 14 ವರ್ಷಗಳ ಬಾಲಕಿಯರು, ಅಲ್ವಾ ಸ್ಟ್ರೀಟ್ ನ 52 ವರ್ಷದ ಮಹಿಳೆ, ಅಜಾಜ್ ನಗರ ಜಾಲಿಯ 31 ವರ್ಷದ ಪುರುಷ, ಕೊಕ್ತಿನಗರದ 41 ವರ್ಷದ ಮಹಿಳೆ . ಅಜಾದ ನಗರದ 56 ವರ್ಷದ ಮಹಿಳೆ, ಅಸಿಯಾನ್ ಕಿದ್ವಾಯ್ ರೋಡನ 39 ವರ್ಷದ ಪುರುಷ
ಇವರೆಲ್ಲ ದುಬೈನಿಂದ ಬಂದವರಾಗಿದ್ದು, ಮುಗ್ದಮ್ ಕಾಲೋನಿಯ 30 ವರ್ಷದ ಮಹಿಳೆ ಚೆನೈನಿಂದ ಬಂದವರಾಗಿದ್ದಾರೆ ಹಾಗೂ 41 ವರ್ಷದ ಖಾಸಗಿ ಆಸ್ಪತ್ರೆಯ ನರ್ಸನಲ್ಲಿ ಕರೋನಾ ಸೋಂಕು ಪತ್ತೆಯಾಗಿದ್ದು ಒಟ್ಟು ಇಂದು 11 ಪ್ರಕರಣ ಪತ್ತೆಯಾಗಿದೆ.
ವಿಶೇಷವಾಗಿ 41 ವರ್ಷದ ಖಾಸಗಿ ಆಸ್ಪತ್ರೆಯ ನರ್ಸ್ ಗೆ 12047 ಸೋಂಕಿತನ ಸಂಪರ್ಕದಿಂದ ಸೋಂಕು ತಗಲಿದ್ದು ತಾಲುಕಿನ ಜನತೆಗೆ ಆತಂಕತಂದೊಡ್ಡಿದೆ.
ವಿಸ್ಮಯ ನ್ಯೂಸ್ , ಉದಯ್ ಎಸ್ ನಾಯ್ಕ, ಭಟ್ಕಳ