ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಪಟ್ಟಣ ಪಂಚಾಯತ್ ನಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಇ-ಸ್ವತ್ತು ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಹಣಸಮೇತ ವಶಕ್ಕೆ ಪಡೆಯಲಾಗಿದ್ದು, ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಹೊನ್ನಾವರ ಪ.ಪಂ.ಮುಖ್ಯಾಧಿಕಾರಿ ಪ್ರವೀಣಕುಮಾರ ನಾಯಕ ಹಾಗೂ ಪಟ್ಟಣ ಪಂಚಾಯತ್ ಸದಸ್ಯ ಒಬ್ಬರನ್ನು ಲಂಚ ಸ್ವೀಕರಿಸುವಾಗ ವಶಕ್ಕೆ ಮಾಹಿತಿ ವಿಸ್ಮಯ ಟಿ.ವಿಗೆ ಲಭ್ಯವಾಗಿದೆ.
Recruitment 2024: ಬೃಹತ್ ನೇಮಕಾತಿ: 8 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ: SSLC ಆದವರು ಅರ್ಜಿ ಸಲ್ಲಿಸಿ
ಇಲ್ಲಿನ ಉದ್ಯಮನಗರದ ನಿವಾಸಿಗಳಾದ ದಾಮೋದರ ಮಂಜುನಾಥ ನಾಯ್ಕ, ಕಲ್ಯಾಣಿ ಮಂಜುನಾಥ ನಾಯ್ಕ ಅವರಿಗೆ ಇಸ್ವತ್ತು ಮಾಡಿಕೊಡಲು 2 ಲಕ್ಷ ಆರಂಭದಲ್ಲಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ವೇಳೆ ಸದಸ್ಯರೊಬ್ಬರ ಮುಖಾಂತರ 60 ಸಾವಿರ ವ್ಯವಹಾರ ಕುದುರಿಸಿ ಲಂಚ ಸ್ವೀಕರಿಸುವಾಗ ಬಲೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್‌ಪಿ ಕುಮಾರ್ ಚಂದ್ ಮಾರ್ಗದರ್ಶನದಲ್ಲಿ ಕಾರವಾರದ ಲೋಕಾಯುಕ್ತ ಇನ್ಸ್ಪೆಕ್ಟರ್ ವಿನಾಯಕ್ ಬಿಲ್ಲವರವರ ನೇತೃತ್ವದಲ್ಲಿ ದಾಳಿ ನಡೆದಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ