ಹೊನ್ನಾವರ: ತಾಲೂಕಿನಲ್ಲಿ ಪ್ರತಿವರ್ಷ ಮಳೆ ಬಂತದ್ರೆ ಈ ರಸ್ತೆ ಹಳ್ಳ ವಾದಂತಾಗುತ್ತೆ, ಇಲ್ಲಿ ಮಳೆ ನೀರು ಹೋಗಲು ಸರಿಯಾದ ಗಟಾರಿನ ವ್ಯವಸ್ಥೆ ಇಲ್ಲ. ಇಲ್ಲಿನ ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಾಗಿರುವ ದ್ರಶ್ಯ ಹೊನ್ನಾವರ ತಾಲೂಕಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಂಡುಬoದಿದೆ.
ಮಳೆ ಬಂತದ್ರೆ ಪ್ರತಿದಿನ ಓಡಾಡುವ ವಿಧ್ಯಾರ್ಥಿಗಳಿಗೆ, ವೃದ್ದರಿಗೆ, ಸೈಕಲ್, ಬೈಕ್ ನಲ್ಲಿ ಓಡಾಡುವರಿಗೆ ಕಿರಿಕಿರಿಯಾಗೋದಂತು ಸತ್ಯ. ಪ್ರತಿದಿನ ಸಾವಿರಾರು ಜನಸಾಮಾನ್ಯರು ಸಂಚರಿಸುವoತಹ ರಸ್ತೆಯ ದುಸ್ಥಿತಿ ಇದು. ಇಲ್ಲಿ ಬೈಕ್ ನವರು ಬಿದ್ದು ತಾವೇ ಎದ್ದು ಸಮಾಧಾನ ಮಾಡಿಕೊಳ್ಳುವ ಪರಿಸ್ಥಿತಿ ಇದೆ.
ವ್ಯಾಪಾರಸ್ಥರಾದ ಗಜಾನನ ನಾಯ್ಕ ಮಾತನಾಡಿ ಪ್ರತಿವರ್ಷ ಇದೆ ಗೋಳು. ಮಳೆ ಬಂದ್ರೆ ಈ ರಸ್ಥೆ ಹಳ್ಳ ಆಗುತ್ತೆ. ನೀರು ಹೋಗಲಿಕ್ಕೆ ಯಾವುದೇ ಸರಿಯಾದ ವ್ಯವಸ್ಥೆ ಇಲ್ಲಾ ಎನ್ನುತ್ತಾ ತಮ್ಮ ಅಳಲನ್ನು ತೋಡಿಕೊಂಡಿದ್ದು ಹೀಗೆ. ಇನ್ನೋರ್ವ ಸ್ಥಳಿಯವರಾದ ಕೇಶವ ನಾಯ್ಕ ಮಾತನಾಡಿ ಪ್ರತಿವರ್ಷ ಇದೆ ಸಮಸ್ಯೆಯಿದ್ದು, ಪಟ್ಟಣ ಪಂಚಾಯಿತಿಯವರು ಗಟಾರ ವ್ಯವಸ್ಥೆ ಬಗ್ಗೆ ಆಗಲಿ, ರಸ್ತೆ ಬಗ್ಗೆ ಆಗಲಿ ಇದರ ಬಗ್ಗೆ ಯಾವುದೇ ಕ್ರಮಕೈಗೊಳ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ಒಟ್ಟಾರೆ ಈ ಸಮಸ್ಯೆಗೆ ಸಂಬoಧಿಸಿದ ಅಧಿಕಾರಿಗಳು ಬಂದು ಸಮಸ್ಯೆಯನ್ನು ಬಗೆಹರಿಸುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ