Follow Us On

WhatsApp Group
Important
Trending

ಒಬ್ಬಂಟಿಯಾಗಿ ಸಾಗುವ ಮಹಿಳೆಯರಿಗೆ ಈತ ಏನ್ ಮಾಡ್ತಿದ್ದ ನೋಡಿ? ಪೊಲೀಸರಿಂದ ಬಂಧನ

ಶಿರಸಿ: ಬೈಕಿನ ಮೇಲೆ ತೆರಳುವಾಗ ಒಬ್ಬಂಟಿಯಾಗಿ ಸಾಗುವ ಮಹಿಳೆಯರ ಹಿಂಭಾಗಕ್ಕೆ ಹೊಡೆಯುತ್ತಿದ್ದ ಕಾಮುಕನೋರ್ವನನ್ನು ಶಿರಸಿ ಮಾರುಕಟ್ಟೆ ಪೋಲೀಸರು ಬಂಧಿಸಿದ ಘಟನೆ ನಡೆದಿದೆ. ಇಲ್ಲಿನ ನೆಹರುನಗರದ ಮೊಹಮ್ಮದ್ ಮಕ್ಬೂಲ್ ಅಹ್ಮದ್ ಮುಲ್ಲಾ ಎಂಬಾತನೇ ಬಂಧಿತ ಯುವಕ ಎಂದು ತಿಳಿದುಬಂದಿದೆ.

ಮಹಿಳೆಯೊಬ್ಬಳು ಆದರ್ಶ ನಗರದ ನಿರ್ಜನ ಪ್ರದೇಶದಲ್ಲಿ ಹೋಗುತ್ತಿರುವಾಗ ಬೈಕ್ ಮೇಲೆ ಬಂದ ಆರೋಪಿ ಆ ಮಹಿಳೆಯ ಹಿಂಭಾಗಕ್ಕೆ ಹೊಡೆದಿದ್ದಾನೆ. ಆ ವೇಳೆಗೆ ಮಹಿಳೆಯು ಹೆದರಿದ್ದಾಳೆ.. ಆಗ ಮತ್ತೆ ಬೈಕ್ ತಿರುಗಿಸಿಕೊಂಡು ಬಂದ ಯುವಕ ಆಕೆಯ ಮಾನ ಹಾನಿ ಮಾಡಲು ಪ್ರಯತ್ನಿಸಿದ್ದಾನೆ. ಈ ಕುರಿತು ಶಿರಸಿ ಮಾರುಕಟ್ಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ಧಾಖಲಿಸಿಕೊಂಡ ಮಾರುಕಟ್ಟೆ ಪೋಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button