ಅಂಕೋಲಾ : ಶಿರೂರು ಗುಡ್ಡ ಕುಸಿತದ ದುರಂತ ಪ್ರಕರಣ ನಡೆದು 5ನೇ ದಿನವೂ ಮಣ್ಣು ತೆರೆ ಮತ್ತು ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಮುಂದುವರೆದಿದೆ.ಈ ನಡುವೆ ಘಟನಾ ಸ್ಥಳದಿಂದ ಸುಮಾರು ಮೂರು ಕಿಲೋಮೀಟರ್ ದೂರದವರೆಗೆ ಮಾಧ್ಯಮದವರನ್ನು ಒಳಬಿಡದೇ,ಸುರಕ್ಷತೆಯ ನೆಪವೊಡ್ಡಿ ಜಿಲ್ಲಾಡಳಿತ ಪೊಲೀಸ್ ವ್ಯವಸ್ಥೆಯನ್ನು ಮುಂದೆ ಇಟ್ಟುಕೊಂಡು ನಿರ್ಬಂಧ ಹೇರುತ್ತಿದೆ.ಇದನ್ನು ಪ್ರಶ್ನಿಸಿ ಸ್ವತ: ಸ್ಥಳೀಯ ಶಾಸಕ ಸತೀಶ ಸೈಲ್,ಆಡಳಿತ ವ್ಯವಸ್ಥೆ ವಿರುದ್ಧ ತಮ್ಮ ಅಸಮಧಾನ ವ್ಯಕ್ತಪಡಿಸಿ ಬ್ಯಾರಿಕೇಡ್ ದಾಟಿ ಮುನ್ನುಗ್ಗಿ,ಬಹುದೂರ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗಿ,ಪತ್ರಿಕಾ ರಂಗವು ಸಹ ,ಶಾಸಕಾಂಗ ಕಾರ್ಯಾಂಗ ನ್ಯಾಯಾಂಗದಂತೆ ನಮ್ಮ ಆಡಳಿತ ವ್ಯವಸ್ಥೆಯ ನಾಲ್ಕನೇ ಬಹುಮುಖ್ಯ ಅಂಗವಾಗಿದ್ದು,ನಾನು ಮಾಧ್ಯಮದವರ ಪರ ಹಾಗೂ ನನ್ನ ಕ್ಷೇತ್ರದ ಬಡ ಜನತೆಯ ಪರವಾಗಿ ಇದ್ದೇನೆ.
ಕೇರಳ ರಾಜ್ಯದ ಅರ್ಜುನ್ ಎನ್ನುವ ವ್ಯಕ್ತಿ ಗುಡ್ದ ಕುಸಿತದ ವೇಳೆ ಬೆಂಜ್ ವಾಹನದಲ್ಲಿ ಸಿಲುಕಿದ್ದಾನೆ ಎಂದು , ಆತನ ರಕ್ಷಣೆಗೆ ತ್ವರಿತ ಕಾರ್ಯಾಚರಣೆ ಕೈಗೊಳ್ಳುವಂತೆ ವಿನಂತಿಸಿದ್ದರು. ಹಾಗಾಗಿ ಬೇರೆ ರಾಜ್ಯದ ವ್ಯಕ್ತಿಯಾಗಿದ್ದರು ಸಹ ಆತನ ಜೀವವು ಅಮೂಲ್ಯವಾಗಿದ್ದು,ಇಲ್ಲಿನ ಕಾರ್ಯಾಚರಣೆ,ಪಕ್ಕದ ರಾಜ್ಯದವರಿಗೆ ತಪ್ಪು ಸಂದೇಶ ಹೋಗದಂತೆ, ನಾವೆಲ್ಲ ಮಾನವೀಯ ನೆಲೆಯಲ್ಲಿಯೂ ಜವಾಬ್ದಾರಿ ಮರೆಯಬೇಕಿದೆ .
ಮತ್ತು ನಾಪತ್ತೆಯಾದ ಅರ್ಜುನ್,ಅವರ ಕುಟುಂಬದ ನಂಬಿಕೆ ಮತ್ತು ಮಹದಾಸೆ ಎಂಬಂತೆ,ನಾನು ಸಹ ಅವನು ಬದುಕಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುವದಾಗಿ ತಿಳಿಸಿದರು.ಒಟ್ಟಿನಲ್ಲಿ ನಿರಂತರ ಮಳೆ,ಗುಡ್ಡ ಕುಸಿತದ ಭೀತಿ ನಡುವೆ ,ತಾವು ಸಹ ವಾರಿಯರ್ ಗಳಂತೆ ಹಗಲು ರಾತ್ರಿ ಏನ್ನದೇ ಕರ್ತವ್ಯ ನಿರ್ವಹಿಸಿ,ಆಡಳಿತ ವರ್ಗವನ್ನು ಎಚ್ಚರಿಸುವ,ಅವರ ಉತ್ತಮ ಕಾರ್ಯಗಳನ್ನು ಶ್ಲಾಘಿಸುವ,ನೊಂದವರಿಗೆ ಹೊರಗೆನಿಂದ ನೆರವು ಹರಿದು ಬರಲು ತಮ್ಮ ಸುದ್ದಿ ಮಾಧ್ಯಮಗಳ ಮೂಲಕ ಗಮನಸೆಳೆಯುವ, ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಪ್ರಯಾಣ ಮಾಡದಂತೆ,ಅಥವಾ ಬದಲಿ ಮಾರ್ಗ ಅನುಸರಿಸುವಂತೆ, ಗ್ಯಾಸ್ ಲೀಕೇಜ್ ಮತ್ತಿತರ ತುರ್ತು ಸಂದರ್ಭಗಳಲ್ಲಿ, ಆಡಳಿತ ವ್ಯವಸ್ಥೆಗೂ ಮೊದಲು,ಜನರಿಗೆ ಜಾಗ್ರತಿ ಮತ್ತು ಎಚ್ಚರಿಕೆ ಸಂದೇಶ ನೀಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿರುವ ಮಾಧ್ಯಮದವರನ್ನು , ಮಳೆ ಬೀಳುವ ಪ್ರಮಾಣ ಕಡಿಮೆ ಆಗಿ,ಹೆದ್ದಾರಿಯಾ ಒಂದು ಬದಿಯ ಮಣ್ಣು ತೆರವು ಕಾರ್ಯವು ಪೂರ್ಣಗೊಳ್ಳುತ್ತಿರುವ ಈ ಬಿಗುವಲ್ಲದ ವಾತಾವರಣದ ನಡುವೆ, ಒಮ್ಮೇಲೆ ನಿರ್ಬಂಧಿಸಿರುವ ಕ್ರಮ ಎಷ್ಟರ ಮಟ್ಟಿಗೆ ಸರಿ ಎನ್ನುವುದಕ್ಕೆ ಆಡಳಿತ ವರ್ಗವೇ ಉತ್ತರಿಸಬೇಕಿದೆ. ಇಲ್ಲದಿದ್ದರೆ ಗುಪ್ತ ಕಾರ್ಯಾಚರಣೆ ಏನಾದರೂ ನಡೆಯುತ್ತಿರಬಹುದೇ, ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದಲೂ ಕೇಳಿಬಂದಿದೆ .
ಈ ವೇಳೆ ಕಾಲ್ನಡಿಗೆಯಲ್ಲಿಯೇ ಹೊರಟಿದ್ದ ಸೈಲ್ ಅವರನ್ನು ಪೊಲೀಸರು ಮತ್ತೆ ತಡೆವ ಯತ್ನ ಮಾಡಿದರೂ ಜಗ್ಗದ ಶಾಸಕ, ಬಹುದೂರ ದಾರಿ ತುಳಿದು ಬಂದಿದ್ದರು. ಈ ವೇಳೆ ವಾಹನದಲ್ಲಿ ಅವರನ್ನು ಹಿಂಬಾಲಿಸಿ ಬಂದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸೈಲ್ ಅವರನ್ನು ಮನವೊಲಿಸಿ,ತಮ್ಮ ವಾಹನದಲ್ಲಿ ಕರೆದೊಯ್ದರು.
ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಡಿಸಿ ಮತ್ತಿತರರು,ನಿರುತ್ತರರಾಗಿ,ಮಾಧ್ಯಮ ನಿರ್ಬಂಧವನ್ನು ಹಿಂತೆಗೆದುಕೊಂಡಂತೆ ಇತ್ತು ಇದರಿಂದ ಸ್ಥಳೀಯ, ಜಿಲ್ಲಾ, ರಾಜ್ಯ ಹಾಗೂ ಕೇರಳ ಸೇರಿದಂತೆ ಇತರೆ ದೇಶಿಯ ಮಾಧ್ಯಮಗಳು ಸೈಲ್ ಅವರ ಜನಪರ ನಡೆ ಮತ್ತು ಮಾಧ್ಯಮದ ಮೇಲೆ ಅವರಿಟ್ಟೆರುವ ಭರವಸೆ, ಗೌರವಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಶಾಸಕ ಸೈಲ್ ಮತ್ತು ಉಸ್ತುವಾರಿ ಸಚಿವ ಮಂಕಾಳ ವೈದ್ಯ,ಘಟನಾ ಸ್ಥಳಕ್ಕೆ ತೆರಳಿ, ಕ್ರೇನ್ ಮೂಲಕ ಗುಡ್ಡದ ಎತ್ತರದ ಪ್ರದೇಶದಲ್ಲಿ ಇಳಿದು, ಅಲ್ಲಿ ಡಿಟೆಕ್ಟರ್ ಬಳಸಿ ಬೆಂಜ್ ವಾಹನ ಇದೆಯೇ ಎಂದು ಶೋಧಿಸುತ್ತಿದ್ದ ಸಿಬ್ಬಂದಿಗಳಿಗೆ ಸೂಕ್ತ ಸಲಹೆ ನೀಡಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ