Important
Trending

ಅಂಕೋಲಾ ದುರಂತ: ಸ್ಥಳೀಯ ಮೀನುಗಾರರ ಸಹಕಾರದಲ್ಲಿ, ಮುಳುಗು ತಜ್ಞ ಈಶ್ವರ ಮಲ್ಪೆ ತಂಡದ ಕಾರ್ಯಾಚರಣೆ

ನೌಕಾದಳದ ಟಗ್ ಬೋಟ್ ಬಳಕೆ ಸಾಧ್ಯತೆ

ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಜುಲೈ 27 ರಂದು 12ನೇ ದಿನಕ್ಕೆ ತಲುಪಿದ್ದು, ನಿರೀಕ್ಷೀತ ಯಶಸ್ಸು ಸಿಗದೇ ಮತ್ತೆ ಮತ್ತೆ ಪ್ರಯತ್ನಿಸುವಂತಾಗಿದೆ. ಶುಕ್ರವಾರ ಗಂಗಾವಳಿ ನದಿಯ ನೀರಿನ ಹರಿವಿನ ವೇಗ ಹೆಚ್ಚಾಗಿ ಶೋಧ ಕಾರ್ಯಕ್ಕೆ ಅಡ್ಡಿಯಾಗಿತ್ತು.

ಶಿರೂರು ಗುಡ್ದಕುಸಿತ ದುರಂತ : ಸ್ಮಶಾನದಲ್ಲಿ ಹೂತಿದ್ದ ಶವ ಹೊರತೆಗೆಸಿದ್ದೇಕೆ ?

ಮುಳುಗು ತಜ್ಞ ಎಂದೇ ಹೆಸರಾದ ಈಶ್ವರ ಮಲ್ಪೆ ನೇತೃತ್ವದಲ್ಲಿ, ಸ್ಥಳೀಯ ಹಾಗೂ ಗಾಬಿತವಾಡಾ , ಬೆಳಂಬಾರ ಮತ್ತಿತರಡೆಯ ಮೀನುಗಾರರ ವಿಶೇಷ ಸಹಕಾರ ಮತ್ತು ದೋಣಿಗಳನ್ನು ಬಳಸಿಕೊಂಡು ಶೋಧ ಕಾರ್ಯಾಚರಣೆ ನಡೆಸಲಾಗುತ್ತದೆ ಎನ್ನುವ ಮಾಹಿತಿ ಇದೆ. ನೌಕಾ ಪಡೆಯ ಟಗ್ ಮಶೀನ್ ಸಹ ಕಾರ್ಯಾಚರಣೆಗೆ ಬಳಸಿಕೊಳ್ಳುವ ಸಾಧ್ಯತೆ ಕೇಳಿಬಂದಿದೆ. ದಿನದಿಂದ ದಿನಕ್ಕೆ ಶೋಧ ಕಾರ್ಯಾಚರಣೆ ಒಂದರ್ಥದಲ್ಲಿ ನಿರಾಸೆ ತಂದರೂ,ಮರಳಿ ಯತ್ನವ ಮಾಡು ಎನ್ನುವಂತೆ ಹೊಸ ಹೊಸ ವಿಧಾನಗಳ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ.

ಜೋರಾದ ಮಳೆ ಗಾಳಿ,ಗುಡ್ಡ ಕುಸಿತದ ಭೀತಿ,ಖಚಿತವಾಗಿ ಗುರುತಿಸಲಾಗದ ಮೆಟಲ್ ಅಂಶ ಮತ್ತಿತರ ಕಾರಣಗಳಿಂದ ಕಾರ್ಯಾಚರಣೆಗೆ ಹಿನ್ನಡೆಯಾದಂತಿತ್ತು. ಹಾಗಾಗಿ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ದೊರೆಯುವವರೆಗೂ ಎಲ್ಲರೂ ಕಾಯಲೇಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button