Follow Us On

WhatsApp Group
Focus News
Trending

ಗಮನಸೆಳೆಯುತ್ತಿದೆ ಅಯೋಧ್ಯೆಯ ಶ್ರೀರಾಮ ಮಂದಿರದ ಮಾದರಿ: ನೆಲಮಹಡಿಯಲ್ಲಿ ಬಾಲರಾಮನ ಭಾವಚಿತ್ರ

ಹೊನ್ನಾವರ : ಎಲ್ಲರಿಗೂ ಅಯೋಧ್ಯೆಗೆ ತೆರಳಿ ಶ್ರೀರಾಮ ಮಂದರಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇವರು ಎಲ್ಲೆಡೆ ಅಯೋಧ್ಯೆಯ ಶ್ರೀರಾಮ ಮಂದಿರದ ಮಾದರಿಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಮೂರು ಮಹಡಿಯನ್ನು ನಿರ್ಮಿಸಲಾಗಿದ್ದು, ನೆಲಮಹಡಿಯಲ್ಲಿ ಬಾಲರಾಮನ ಭಾವಚಿತ್ರ ಇರಿಸಲಾಗಿದೆ. ಸಂಚಾರಿ ಮಂದಿರವಾಗಿದ್ದರಿoದ ಅದನ್ನು ಬಿಡಿಸಿಟ್ಟು ಪುನಃ ಜೋಡಿಸುವ ವ್ಯವಸ್ಥೆ ಮಾಡಲಾಗಿದೆ. ಸುಮಾರು 80 ಕೆ.ಜಿ ತೂಕವಿದ್ದು ಇದಕ್ಕೆ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದು, ಅಯೋಧ್ಯೆಯ ಶ್ರೀರಾಮ ಮಂದಿರ ಹೋಲಿಕೆ ಆಗುತ್ತಿದೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ದುರ್ಗಾಕೇರಿಯಲ್ಲಿರುವ ಶ್ರೀ ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ 10 ದಿನಗಳವರೆಗೆ ಈ ಉಚಿತ ಪ್ರದರ್ಶನ ನಡೆಯಲಿದೆ. ಇದನ್ನು ಥರ್ಮಾಕೋಲ್, ಟೂತ್ ಪೀಕ್, ಅರ್ಕಾಲಿಕ್ ವಾಟರ್ ಪೇಂಟ್, ಗುಂಡುಸೂಜಿ ಹಾಗೂ ಫೆವಿಕಾಲ್ ಬಳಸಿ ತಯಾರಿಸಿದ್ದು, ವಿನಯ್ ರಾಮ ಅವರು ಸಿದ್ದಪಡಿಸಿದ್ದಾರೆ. ಇವರು ಮೂಲತಃ ತುಮಕೂರಿನ ಗುಬ್ಬಿ ತಾಲ್ಲೂಕಿನವರು.

ಮಂದಿರವನ್ನು ತಯಾರಿಸಿದ ವಿನಯ ರಾಮ್ ವಿಸ್ಮಯ ಟಿ.ವಿಯೊಂದಿಗೆ ಮಾತನಾಡಿ ಶ್ರೀರಾಮನ ಆದರ್ಶ, ಚಿಂತನೆಯನ್ನು ಜನಸಾಮಾನ್ಯರಿಗೆ ತಲುಪಿಸುವಂತಹ ಕಾರ್ಯವನ್ನು ಕೈಗೊಂಡಿದ್ದು ನಿರಂತರ ಪ್ರಯಾಣ ಬೆಳೆಸುತ್ತಿದ್ದೇವೆ. ಉಚಿತವಾಗಿ 108 ಕಡೆ ಪ್ರದರ್ಶನವನ್ನು ನೀಡುವ ಸಂಕಲ್ಪವನ್ನು ಕೈಗೊಂಡಿದ್ದು, ಮೈಸೂರಿನ ನೋಟು ಮುದ್ರಣ ಸಂಸ್ಥೆಯಲ್ಲಿ, ಶೃಂಗೇರಿಯ ಮಠದಲ್ಲಿ, ಮಂತ್ರಾಲಯದಲ್ಲಿ, ಹೀಗೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಪ್ರದರ್ಶನಗೊಂಡಿದ್ದು, ಈಗ ಹೊನ್ನಾವರದಲ್ಲಿ 69ನೇ ಪ್ರದರ್ಶನವಾಗಿದೆ ಎಂದು ಮಾಹಿತಿ ನೀಡಿದರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button